ರೈತರ ಮಕ್ಕಳಿಗೆ 'ಕನ್ಯೆ' ಕೊಡಲಿ : 'ಹರಕೆ' ಸಲ್ಲಿಸಿ ದೇವರಿಗೆ ಮೊರೆಯಿಟ್ಟ ಯುವಕ

ರೈತರ ಮಕ್ಕಳಿಗೆ 'ಕನ್ಯೆ' ಕೊಡಲಿ : 'ಹರಕೆ' ಸಲ್ಲಿಸಿ ದೇವರಿಗೆ ಮೊರೆಯಿಟ್ಟ ಯುವಕ

ವಿಜಯನಗರ : ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳ ನಡುವೆ ಭಕ್ತನೊಬ್ಬ ದೇವರಿಗೆ ಹರಕೆ ನೀಡಿದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಗರಾಜ್ ಎಂಬ ಯುವಕ ಬಾಳೆಹಣ್ಣಿನ ಮೇಲೆ ರೈತರ ಮಕ್ಕಳಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಬರೆದು ತೇರಿಗೆ ಸಮರ್ಪಿಸಿದ್ದಾನೆ.

ಚಿಮ್ಮನಹಳ್ಳಿಯ ದುರ್ಗಾದೇವಿ ಜಾತ್ರೆ ನಡೆಯುತ್ತಿದ್ದ ವೇಳೆ ಭಕ್ತ ನಾಗರಾಜ್ ಹರಕೆ ಸಮರ್ಪಿಸಿದ್ದಾನೆ. ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ, ಅವರ ಮನಸ್ಸು ಬದಲಾಗಲಿ ಎಂದು ಭಕ್ತ ಹರಕೆ ನೀಡಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ಈ ತೊಂದರೆ ದಿನೇ ದಿನೇ ಹೆಚ್ಚಾಗಲಾರಂಭಿಸಿದ್ದು,. ರೈತರ ಮಕ್ಕಳಿಗೆ ಕನ್ಯೆ ಕೊಡ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿರುವ ಸಾಕಷ್ಟು ಘಟನೆ ರಾಜ್ಯದ ಹಲವು ಕಡೆ ವರದಿಯಾಗುತ್ತಲೇ ಇದೆ.