ಗುಬ್ಬಿಯ ಚೆನ್ನಬಸವೇಶ್ವರ ಜಾತ್ರೆಗೂ ತಟ್ಟಿದ ಧರ್ಮದಂಗಲ್..! ಅನ್ಯಕೋಮಿನವರ ವ್ಯಾಪಾರ ನಿಷೇಧಕ್ಕೆ ಒತ್ತಾಯ

ತುಮಕೂರು : ಕರಾವಳಿಯ ಧರ್ಮದಂಗಲ್ ಇದೀಗ ತುಮಕೂರು ಜಿಲ್ಲೆಗೂ ತಟ್ಟಿದ್ದು, ಗುಬ್ಬಿಯ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ಯಕೋಮಿನವರಿಗೆ ವ್ಯಾಪಾರ ನಡೆಸಲು ನಿಷೇಧ ಹೇರಲು ಒತ್ತಾಯಿಸಲಾಗಿದೆ.ಫೆಬ್ರವರಿ 25 ರಿಂದ ಮಾರ್ಚ್ 19ರವರೆಗೆ ನಡೆಯಲಿರುವ ಗುಬ್ಬಿಯ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿಯ ಜಾತ್ರಮಹೋತ್ಸವದಲ್ಲಿ ಅನ್ಯಕೋಮಿನವರ ವ್ಯಾಪಾರಿಗಳಿಗೆ ದೇವಸ್ಥಾನದ ಆವರಣದಿಂದ 100 ಮೀ. ದೂರದವರೆಗೂ ವ್ಯಾಪಾರ ನಡೆಸಲು ಅವಕಾಶ ನೀಡಬಾರದೆಂದು ಬಜರಂಗದಳದ ಹಾಗೂ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಗೆ ಮನವಿ ಸಲ್ಲಿಸಲಾಗಿದೆ.