ಶಿವಮೊಗ್ಗದಲ್ಲಿ ವಿಚಿತ್ರ ಘಟನೆ : ಸ್ಮಶಾನದಿಂದ ಮಹಿಳೆಯ ಚಿತಾಭಸ್ಮವೇ ಮಾಯಾ: ಬೆಚ್ಚಿಬಿದ್ದ ಗ್ರಾಮಸ್ಥರು

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾ. ಪಂ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಸ್ಮಶಾನದಲ್ಲಿ ಸುಟ್ಟ ಶವದ ಬೂದಿಯನ್ನೆ ಕದ್ದುಕೊಂಡು ವಿಚಿತ್ರ ಘಟನೆ ಸ್ಮಶಾನದಲ್ಲಿ ಜರುಗಿದೆ.
ತೀರ್ಥಹಳ್ಳಿ ಪಟ್ಟಣದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರದಲ್ಲಿ 3 ದಿನದ ಹಿಂದೆ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದರು . ಆ ಮಹಿಳೆಯ ಶವವನ್ನು ಇಲ್ಲಿನ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ ದಹನ ಮಾಡಲಾಗಿತ್ತು.
ಸಾವಿಗೀಡಾದ ಮಾರನೇ ದಿನ ಬಳಿಕ ಸಂಬಂಧಿಗಳು ಸ್ಮಶಾನಕ್ಕೆ ಬಂದು ಚಿತಾಭಸ್ಮ ತೆಗೆದುಕೊಂಡು ಹೋಗಲು ನೋಡಿದಾಗ ಅಲ್ಲಿ ಚಿತ ಭಸ್ಮವೇ ಮಾಯವಾಗಿತ್ತು ಇದನ್ನು ಕಂಡ ಶಾಕ್ ಆಗಿದ್ದಾರೆ. ಈ ಚಿತ ಭಸ್ಮ ಮಾಯವಾಗುವುದಕ್ಕೆ ಯಾರೋ ಅಪರಿಚಿತರ ಕೈವಾಡ ಇರಬಹುದೆಂದು ಶಂಕಿಸಿದರು. ಜಿಲ್ಲೆಯಲ್ಲೆ ಬೆಚ್ಚಿಬೀಳುಸುವ ದುರಂತ ಘಟನೆ ಬೆಳಕಿಗೆ ಬಂದಿದೆ.