ಬೆಂಗಳೂರಲ್ಲಿ ಪಲ್ಸರ್‌ ಬೈಕ್‌ ಕದ್ದು ಖತರ್ನಾಕ್‌ ಕಳ್ಳ ಎಸ್ಕೇಪ್‌ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರಲ್ಲಿ ಪಲ್ಸರ್‌ ಬೈಕ್‌ ಕದ್ದು ಖತರ್ನಾಕ್‌ ಕಳ್ಳ ಎಸ್ಕೇಪ್‌ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ವಾಣಿಜ್ಯ ನಗರಿ ಬೆಂಗಳೂರಿನಲ್ಲಿ ಕಳ್ಳರಿಗೇನು ಕಮ್ಮಿ ಇಲ್ಲ ಅನ್ನುವ ಮಟ್ಟಿಗೆ ದಿನದಿಂದ ದಿನಕ್ಕೆ ಖತರ್ನಾಕ್‌ ಕಳ್ಳರ ದೃಶ್ಯಗಳ ವೈರಲ್‌ ಆಗುತ್ತಲೇ ಇರುತ್ತದೆ. ಇದೀಗ ಬೇಗೂರು ರಸ್ತೆಯ ಹೊಂಗಸಂದ್ರದಲ್ಲಿ ಪಲ್ಸರ್‌ 150 ಬೈಕ್‌ ಕದ್ದು ಎಸ್ಕೇಪ್‌ ಆದ ಘಟನೆ ನಡೆದಿದೆ.

ಇದು ಜನವರಿ 31ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆಸಿದ ಕಳ್ಳತನ ಎಂದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾ ಮೂಲಕ ತಿಳಿಯಲಾಗಿದೆ. ಖತರ್ನಾಕ್‌ ಕಳ್ಳನಿಗಾಗಿ ಹುಡುಕಾಟಕ್ಕಾಗಿ ಬೇಗೂರು ಪೊಲೀಸರು ಶೋಧಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.