ಅದ್ಧೂರಿಯಾಗಿ ಮದುವೆಯಾಗೋದಕ್ಕಾಗಿ ಈತ ಮಾಡಿದ್ದೇನು ಗೊತ್ತಾ.?

ಅದ್ಧೂರಿಯಾಗಿ ಮದುವೆಯಾಗೋದಕ್ಕಾಗಿ ಈತ ಮಾಡಿದ್ದೇನು ಗೊತ್ತಾ.?

ಹುಬ್ಬಳ್ಳಿ: ಟಿವಿಎಸ್ ಷೋ ರೂಂ ಒಂದರಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಂತ ಆತನಿಗೆ ಅದ್ಧೂರಿಯಾಗಿ ಮದುವೆಯಾಗೋ ಯೋಚನೆ ಬಂತು. ಇದಲ್ಲದೇ ಮೊದಲೇ ಮಾಡಿದಂತ ಸಾಲದಿಂದ ಬಚಾವಾಗೋದಕ್ಕೆ ಫ್ಲಾನ್ ಕೂಡ ಮಾಡಿದ. ಆದ್ರೇ.. ಗ್ರಹಚಾರ ನೆಟ್ಟಗಿರಲಿಲ್ಲ. ಮುಂದೆ ಆಗಿದ್ದೇ ಬೇರೆಯಾಗಿತ್ತು. ಅದೇನು ಅಂತ ಮುಂದೆ ಓದಿ. ವಿಜಯಪುರದ ಪ್ರವೀಣ್ ಕುಮಾರ್ ಎಂಬಾತ ಪಿಯುಸಿ ಓದಿ, ಮೈಸೂರಿನ ಊಟಿ ರಸ್ತೆಯಲ್ಲಿರೋ ಟಿವಿಎಸ್ ಷೋ ರೂಂ ಒಂದರಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ವಿವಿಧ ಕಾರಣದಿಂದಾಗಿ ಸ್ನೇಹಿತರು ಸೇರಿದಂತೆ ವಿವಿಧ ಜನರಿಂದ 7 ಲಕ್ಷ ಸಾಲ ಮಾಡಿದ್ದನು. ಇದಲ್ಲದೇ ನಾಳೆ ಮದುವೆಯೂ ಸೆಟ್ ಆಗಿತ್ತು. ಅದ್ಧೂರಿಯಾಗಿ ಮದುವೆ ಹಾಗೂ ಸಾಲ ತೀರಿಸೋದಕ್ಕಾಗಿ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದಾನೆ. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಗೆ ತೆರಳಿದಂತ ಈತ, ಗ್ರಾಹಕರ ಸೋಗಿನಲ್ಲಿ ಓಳಗೆ ಹೋಗಿ, ಮ್ಯಾನೇಜರ್ ಮತ್ತು ಕ್ಯಾಷಿಯರ್ ಗೆ ಚಾಕುವಿನಿಂದ ಬೆದರಿಸಿ ಜನವರಿ 18ರಂದು 6 ಲಕ್ಷ ರೂಪಾಯಿಯನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗುತ್ತಿದ್ದನು. ಆದ್ರೇ ಗ್ರಹಚಾರ ಸರಿ ಇರಲಿಲ್ಲ ಅಂತ ಕಾಣಿಸುತ್ತೆ. ಅಲ್ಲೇ ಇದ್ದಂತ ಇಬ್ಬರು ಪೊಲೀಸ್ ಪೇದೆಗಳು ಬೆನ್ನಟ್ಟಿ ಹಿಡಿದಿದ್ದರು. ಈ ಮೂಲಕ ನಾಳೆ ನಿಗದಿಯಾಗಿದ್ದಂತ ಮದುವೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಬೇಕು ಎನ್ನುವ ಯೋಚನೆಯಲ್ಲಿದಾತ ಈಗ ಜೈಲು ಸೇರಿದ್ದಾನೆ.