ಇದೆಂಥಾ 'ಅಪರೂಪದ ಸರ್ಜರಿ'..! 'ಕಾಲಿನ ಹೆಬ್ಬೆರಳನ್ನು ಕೈಗೆ' ಜೋಡಿಸಿದ ವೈದ್ಯರು

ಉತ್ತರಾಖಂಡ : ನಗರದ 44 ವರ್ಷದ ರೋಗಿಗೆ ಕೈಯ ಮೂರು ಬೆರಳುಗಳನ್ನು ಮತ್ತೆ ಜೋಡಿಸಿ ಕಾಲಿನ ಹೆಬ್ಬೆರಳನ್ನು ಬಳಸಿ ಕೈಗೆ ಕೂಡಿಸುವ ಮೂಲಕ ಅಪರೂಪದ ಸರ್ಜರಿಯೊಂದನ್ನು ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರೊಬ್ಬರು ಮಾಡಿ, ಯಶಸ್ವಿಯಾಗಿದ್ದಾರೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರೋಗಿಯು ಉತ್ತರಾಖಂಡದ ತನ್ನ ಘಟಕದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ತೋರುಬೆರಳು, ಮಧ್ಯ, ಉಂಗುರ ಬೆರಳು ಮತ್ತು ಹೆಬ್ಬೆರಳನ್ನು ಕಳೆದುಕೊಂಡಿದ್ದ. ತೀವ್ರವಾಗಿ ರಕ್ತಸ್ರಾವವಾದ ಕಾರಣ ಗಾಯಗೊಂಡ ಎಂಟು ಗಂಟೆಗಳ ನಂತರ ಸಹೋದ್ಯೋಗಿಗಳು ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ದರು. ಅವರು ತಮ್ಮ ಜೊತೆಗೆ ಅವನ ಕತ್ತರಿಸಿದ ಬೆರಳುಗಳನ್ನು ಪಾಲಿಥೀನ್ ಚೀಲದಲ್ಲಿ ಒಯ್ದರು. ಆದರೆ ಅವನ ಹೆಬ್ಬೆರಳು ವಾಪಸ್ ಜೊಡಿಸಲು ಸಾಧ್ಯವಾಗದಷ್ಟು ಸಮಸ್ಯೆಗೆ ಒಳಗಾದರು.
ಈ ಅಪರೂಪದ ಸರ್ಜರಿ ನಡೆಸಲು ಡಾ.ಮಹೇಶ್ ಮಂಗಲ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಯಿತು. ಇದರಲ್ಲಿ ಪ್ಲಾಸ್ಟಿಕ್ ಸರ್ಜರಿ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ವಿಭಾಗದ ಡಾ.ಎಸ್.ಎಸ್.ಗಂಭೀರ್, ಡಾ.ನಿಖಿಲ್ ಜುಂಜುನ್ವಾಲಾ ಮತ್ತು ಡಾ.ಪೂಜಾ ಗುಪ್ತಾ ಮತ್ತು ಮೂಳೆಚಿಕಿತ್ಸಾ ವಿಭಾಗದ ಡಾ.ಮನೀಶ್ ಧವನ್ ಇದ್ದರು. ಬಳಿಕ 10 ಗಂಟೆಗಳ ಮೈಕ್ರೋಸರ್ಜರಿಯ ನಂತರ, ಎಲ್ಲಾ ಮೂರು ಬೆರಳುಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ರಕ್ತನಾಳ, ನರ, ಮೂಳೆಗಳು ಮತ್ತು ಸ್ನಾಯುಗಳನ್ನು ಸೇರಿಸುವ ಮೂಲಕ ಜೋಡಿಸಲಾಯಿತು.
ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಮೈಕ್ರೋಸರ್ಜರಿಯನ್ನು 1981 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ, ಕೈಗಾರಿಕಾ, ಕೃಷಿ, ಮನೆ ಮತ್ತು ರಸ್ತೆ ಅಪಘಾತಗಳಿಂದಾಗಿ ಕತ್ತರಿಸಿದ ದೇಹದ ಭಾಗಗಳನ್ನು ಶಸ್ತ್ರಚಿಕಿತ್ಸಕರು ಮತ್ತೆ ಜೋಡಿಸಿದ್ದಾರೆ. ಈ ಮೂಲಕ ಅಪರೂಪದ ಸರ್ಜರಿ ನಡೆಸುವ ಮೂಲಕ 44 ವರ್ಷದ ರೋಗಿಯ ಕೈ ಮರು ಜೀವನನ್ನು ತಂದುಕೊಟ್ಟಿದ್ದಾರೆ ಅಲ್ಲದೇ ಈ ಸರ್ಜರಿ ವೈದ್ಯಲೋಕವೇ ಬೆಚ್ಚಬೀಳುವಂತೆ ಮಾಡಿದೆ. ವೈದ್ಯರ ಸರ್ಜರಿಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.