ನಾನು ಇಷ್ಟು ಹೊತ್ತಿಗೆ ಅವರಿವರು ಕಾಲು ಹಿಡಿದಂತೆ, ಹಿಡಿದಿದ್ದರೇ ಯಾವತ್ತೋ ಸಿಎಂ ಆಗುತ್ತಿದ್ದೆ - ಶಾಸಕ ಯತ್ನಾಳ್

ನಾನು ಇಷ್ಟು ಹೊತ್ತಿಗೆ ಅವರಿವರು ಕಾಲು ಹಿಡಿದಂತೆ, ಹಿಡಿದಿದ್ದರೇ ಯಾವತ್ತೋ ಸಿಎಂ ಆಗುತ್ತಿದ್ದೆ - ಶಾಸಕ ಯತ್ನಾಳ್

ಲಬುರ್ಗಿ: ನಾನು ಬೇರೆಯವರು ಅವರಿವರ ಕಾಲು ಹಿಡಿದಂತೆ ಹಿಡಿದಿದ್ದರೇ ಇಷ್ಟು ಹೊತ್ತಿಗೆ ಯಾವಾಗಲೋ ಮುಖ್ಯಮಂತ್ರಿ ಆಗುತ್ತಿದೆ. ಆದ್ರೇ ನಾನು ಹಾಗೆ ಮಾಡಲಿಲ್ಲ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಾನು ಯಾವುದೇ ಹುದ್ದೆಯ ಆಸೆ ಪಟ್ಟವನಲ್ಲ.

ಏನು ಆಗದಿದ್ದರೂ ಪರವಾಗಿಲ್ಲ, ಮತ್ತೊಬ್ಬರನ್ನು ನೋಡಿ ಖುಷಿ ಪಡುತ್ತೇನೆ. ಮತ್ತೊಬ್ಬರನ್ನು ನೋಡಿ ಸಂತೋಷ ಪಡುವ ವ್ಯಕ್ತಿ ನಾನು ಎಂದರು.

ನಾನು ಯಾವುದೇ ಹುದ್ದೆಗಾಗಿ ಯಾರೊಬ್ಬರ ಕಾಲು ಹಿಡಿದಿಲ್ಲ. ಅವರಿವರಂತೆ ನಾನು ಕಾಲು ಹಿಡಿದಿದ್ದರೇ ಇಷ್ಟು ಹೊತ್ತಿಗೆ ಯಾವಾಗಲೋ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿದೆ. ಆದ್ರೇ ನನಗೆ ಆ ರೀತಿಯ ಹುದ್ದೆ ಬೇಡ. ಅದು ತಾನಾಗಿಯೇ ಬರಬೇಕು ಎಂದು ಹೇಳಿದರು.

ಈ ಹಿಂದೆ ಹಲವು ಭಾರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾವು ಮುಖ್ಯಮಂತ್ರಿ ಆಗೋ ಅಭಿವಾಷೆಯನ್ನು ವ್ಯಕ್ತ ಪಡಿಸಿದ್ದರು. ಸಿಎಂ ಆಗುವುದಾಗಿಯೂ ಭವಿಷ್ಯ ನುಡಿದಿದ್ದರು. ಇದೀಗ ಮತ್ತೆ ತಮ್ಮ ಸಿಎಂ ಆಸೆಯನ್ನು ಈ ರೀತಿಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ.