ತೃಣಮೂಲ ಕಾಂಗ್ರೆಸ್‌ʼನ ಅಧಿಕೃತ ʻಟ್ವಿಟರ್ʼ ಖಾತೆ ಹ್ಯಾಕ್

ತೃಣಮೂಲ ಕಾಂಗ್ರೆಸ್‌ʼನ ಅಧಿಕೃತ ʻಟ್ವಿಟರ್ʼ ಖಾತೆ ಹ್ಯಾಕ್

ವದೆಹಲಿ: ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌(TMC)ನ ಅಧಿಕೃತ ಟ್ವಿಟರ್(Twitter) ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅದರ ಪ್ರೊಫೈಲ್ ಹೆಸರು ಮತ್ತು ಚಿತ್ರವನ್ನು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.

ಪ್ರೊಫೈಲ್ ಹೆಸರನ್ನು 'ಯುಗಾ ಲ್ಯಾಬ್ಸ್(Yuga Labs)' ಎಂದು ಬದಲಾಯಿಸಲಾಗಿದೆ. ಇದು ಕ್ರಿಪ್ಟೋ ಕಂಪನಿಯ ಹೆಸರಂತೆ ಕಾಣುತ್ತದೆ ಎನ್ನಲಾಗಿದೆ. ಆದಾಗ್ಯೂ, ಹ್ಯಾಕಿಂಗ್ ನಂತರ ಯಾವುದೇ ಹೊಸ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿಲ್ಲ. ಹ್ಯಾಕಿಂಗ್ ಬಗ್ಗೆ ಟ್ವಿಟ್ಟರ್ ಗೆ ಮಾಹಿತಿ ನೀಡಿದ್ದು, ಸರಿಪಡಿಸುವಂತೆ ಕೇಳಿಕೊಂಡಿದ್ದೇವೆ ಎಂದು ತೃಣಮೂಲ ಹೇಳಿದೆ.

'ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗೆ ಧಕ್ಕೆಯಾಗಿದೆ. ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿರುವ ಟ್ವಿಟರ್‌ನ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಅವರು ತ್ವರಿತ ಕ್ರಮದ ಭರವಸೆ ನೀಡಿದ್ದಾರೆ' ಎಂದು ತೃಣಮೂಲ ನಾಯಕ ಡೆರೆಕ್ ಒ'ಬ್ರಿಯಾನ್ ಹೇಳಿದ್ದಾರೆ.