ಇಂದು ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ: ವಿವಿಧ ಕಾಮಗಾರಿಗೆ ಚಾಲನೆ

ಇಂದು ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ: ವಿವಿಧ ಕಾಮಗಾರಿಗೆ ಚಾಲನೆ

ತ್ತರಕನ್ನಡ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಿಟಕೆಗಳು ರಂಗೇರಿದೆ. ರಾಜಕೀಯ ಪಕ್ಷಗಳು ದಿನದಿಂದ ದಿನಕ್ಕೆ ಪ್ರಚಾರ ಭರಾಟೆ ಜೋರಾಗಿದೆ.
ನಾನಾ ಸರ್ಕಸ್​ಗಳನ್ನು ಮಾಡುತ್ತಿವೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಿ ಅನೇಕ ಕಾಮಗಾರಿ, ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಇದೀಗ ಇಂದು ಸಿಎಂ ಬವಸರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾಮಗಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಸಿದ್ದಾಪುರ ತಾಲೂಕಿನ ಎಂ‌ಜಿಸಿ ಕಾಲೇಜು ಆವರಣದಲ್ಲಿರುವ ಎಂ‌ಜಿಸಿ ಕಾಲೇಜಿನ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.

ಹುಬ್ಬಳ್ಳಿಯಿಂದ ಹೆಲಿಕಾಪ್ಟರ್​​ನಲ್ಲಿ ಆಗಮಿಸಲಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಶಿಲಾನ್ಯಾಸ ಮಾಡಲಿದ್ದಾರೆ. ಹಾಗೂ ವಿವಿಧ ಯೋಜನೆಯಡಿ ಸರ್ಕಾರದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಗಣೇಶ ಹೆಗಡೆ ಜನ್ಮಶತಮಾನೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಪ್ರಸಿದ್ಧ ಐತಿಹಾಸಿಕ ಸ್ಥಳವಾದಂತ ಬನವಾಸಿಯಲ್ಲಿ, ಇಂದಿನಿಂದ ಕದಂಬ ಉತ್ಸವ ಆರಂಭಗೊಳ್ಳಲಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.ಫೆಬ್ರವರಿ 28ರ ಇಂದಿನಿಂದ ಎರಡು ದಿನಗಳ ಕಾಲ ಬನವಾಸಿಯಲ್ಲಿ ಕನ್ನಡ ನೆಲ, ಭಾಷೆ, ಸಂಸ್ಕೃತಿಯ ಮಹತ್ವ ಬಿಂಬಿಸುವಂತ ಕದಂಬೋತ್ಸವ ಆರಂಭಗೊಳ್ಳಲಿದೆ.