ಅಬ್ರಹಾರ್ ಗ್ಯಾಂಗ್ ಅಟ್ಟಹಾಸ: ಪೊಲೀಸರ ಮೇಲೆಯೇ ಅಟ್ಯಾಕ್ ಮಾಡುವ ಗ್ಯಾಂಗ್ ನಗರದಲ್ಲಿ ಮತ್ತೆ ಆಯಕ್ಟಿವ್

ಬೆಂಗಳೂರು: ಪೊಲೀಸರ ಮೇಲೆ ದಾಳಿ ಮಾಡುವ ತಂಡ ನಗರದಲ್ಲಿ ಮತ್ತೆ ಸಕ್ರಿಯವಾಗಿದೆ. ಕೆಜಿ ಹಳ್ಳಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮತ್ತು ಆತನ ತಂಡ ಬೆಂಗಳೂರು ಪೊಲೀಸರಿಗೆ ಸವಾಲಾಗಿದ್ದಾರೆ.
ರೌಡಿ ಕಮ್ ಖದೀಮ ಅಬ್ರಹಾರ್ ಇದೀಗ ಮಚ್ಚು ಹಿಡಿದುಕೊಂಡೆ ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಅಡ್ಡಾಡುತ್ತಿದ್ದಾನೆ.
ಅಬ್ರಹಾರ್ ಹಾಗೂ ಮಿರಾಜ್ ಟೀಂ ಈ ಹಿಂದೆ ಆಯಕ್ಟಿವ್ ಆಗಿತ್ತು. ತುಮಕೂರು ಹಾಗೂ ಕೋಲಾರದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಎಸ್ಕೇಪ್ ಆಗಿತ್ತು. ಸಲೀಂ ಎಂಬಾತನ ಮರ್ಡರ್ ಕೇಸಲ್ಲಿ ಕೆಜಿ ಹಳ್ಳಿ ಪೊಲೀಸರು ಈ ಕ್ರಿಮಿಗಳನ್ನು ಹುಡುಕಾಟ ನಡೆಸಿದ್ದರು. ಪುಟ್ಟೇನಹಳ್ಳಿ ಬಳಿ ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಈ ಗ್ಯಾಂಗ್ ದಾಳಿ ಮಾಡಿತ್ತು.
ಇದೀಗ ಮಿರಾಜ್ ಜೈಲಿನಲ್ಲಿದ್ದರೆ, ಅಬ್ರಹಾರ್ ಹೊರಗಡೆ ಆಯಕ್ಟಿವ್ ಆಗಿದ್ದಾನೆ. ಮಚ್ಚಿಡಿದು ಅಡ್ಡಾಡುವ ಮೂಲಕ ಸಿಕ್ಕ ಸಿಕ್ಕವರನ್ನು ದೋಚಿ ಎಸ್ಕೇಪ್ ಆಗ್ತಿದ್ದಾನೆ. ರಸ್ತೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಅಬ್ರಾಹರ್ ಗ್ಯಾಂಗ್ ಸುಲಿಗೆ ಮಾಡುತ್ತಿದೆ. ಕಮಕ್ ಕಿಮಕ್ ಅಂದರೆ ಈ ಪಾಪಿಗಳು ಉಸಿರನ್ನೇ ನಿಲ್ಲಿಸಿಬಿಡ್ತಾರೆ.
ಅಬ್ರಹಾರ್ ಗ್ಯಾಂಗ್, ರಾಜಗೋಪಾಲನಗರ, ಬ್ಯಾಡರಹಳ್ಳಿ ಭಾಗದಲ್ಲಿ ಮಚ್ಚಿಡಿದು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಖಾಕಿ ಪಡೆ ಎಷ್ಟೇ ಹುಡುಕಿದ್ರೂ ಅಬ್ರಹಾರ್ ಮಾತ್ರ ಬಲೆಗೆ ಬೀಳುತ್ತಿಲ್ಲ. (ಏಜೆನ್ಸೀಸ್)