ಬೆಂಗಳೂರಿನ ಜನತೆ ಗಮನಕ್ಕೆ: ಡಿ.26ರಂದು ನಗರದ ಈ ಪ್ರದೇಶಗಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರಿನ ಜನತೆ ಗಮನಕ್ಕೆ: ಡಿ.26ರಂದು ನಗರದ ಈ ಪ್ರದೇಶಗಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ದಿನಾಂಕ 26-12-2022ರಂದು ಬೆಂಗಳೂರಿನ ಕೆಲ ಪ್ರದೇಶಗಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಂಗಳೂರು ನೀರು ಸರಬಾರಜು ಮತ್ತು ಒಳಚರಂಡಿ ಮಂಡಲಿ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಜಲಮಂಡಳಿಯು ಸುರಂಜನ್ ದಾಸ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ ಜಂಕ್ಷನ್ ನಲ್ಲಿ ಬಿಬಿಎಂಪಿ ಇಲಾಖೆಯವರು ಕೆಳಸೇತುವೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 26-12-2022ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಗರದ ಕೆಲ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.ಡಿ.26ರಂದು ಕಾವೇರಿ ನೀರು ಎಂ.ಪಿ ಕ್ಯಾಪ್, ಕೆ ಆರ್ ಗಾರ್ಡನ್, ವಿನಾಯಕ ನಗರ, ಶ್ರೀರಾಮನಗರ ಸ್ಲಂ, ನಂಜಾರೆಡ್ಡಿ ಕಾಲೋನಿ, ಎನ್ ಆರ್ ಬಡಾವಣೆ, ಮಂಜುನಾಥ್ ಬಡಾವಣೆ ಮತ್ತು ಏರ್ ವ್ಯೂ ಕಾಲೋನಿ, ಇಂದಿರಾನಗರ, ಮೋಟಪ್ಪನ ಪಾಳ್ಯ, ಅಪ್ಪಾರೆಡ್ಡಿ ಪಾಳ್ಯ, ಡಿಫೆನ್ಸ್ ಕಾಲೋನಿ, ಮೈಕೆಲ್ ಪಾಳ್ಯ, ಹೆಚ್.ಕಾಲೋನಿ, ಬಿನ್ನಮಂಗಲ 1ನೇ ಹಂತ, ಜಿ.ಎಂ ಪಾಳ್ಯ, ಕಾವೇರಿ ಬಡಾವಣೆ, ಮಲ್ಲೇಶಪಾಳ್ಯ, ಸುದಗುಂಟೆಪಾಳ್ಯ, ಕಗ್ಗದಾಸಪುರ, ನ್ಯೂ ತಿಪ್ಪಸಂದ್ರ ಮತ್ತು ಹೆಚ್ ಎ ಎಲ್ 3ನೇ ಹಂತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಆಗುವುದಿಲ್ಲ.