ಶೀಘ್ರದಲ್ಲೇ ಗೋವಾಕ್ಕೆ ವಂದೇ ಭಾರತ್‌ ರೈಲು ಸಂಚಾರ : ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ

ಶೀಘ್ರದಲ್ಲೇ ಗೋವಾಕ್ಕೆ ವಂದೇ ಭಾರತ್‌ ರೈಲು ಸಂಚಾರ : ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ

ವದೆಹಲಿ : ಗೋವಾಕ್ಕೆ ಶೀಘ್ರವೇ ʻವಂದೇ ಭಾರತ್‌ ರೈಲು ಸಂಚಾರʼವಾಗಲಿದೆ ಎಂದು ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ ನಿರ್ಧಾರಿಸಿದ್ದಾರೆ.

ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಬಿಡಲಾಗುವುದು ಎಂದು ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಮಾಹಿತಿ ನೀಡಿದ್ದಾರೆ.

ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ ಈ ಮಹತ್ವವಾದ ನಿರ್ಧಾರವಾದ ಗೋವಾಕ್ಕೆ ಶೀಘ್ರವೇ ʻವಂದೇ ಭಾರತ್‌ ರೈಲು ಸಂಚಾರದ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ನಿಯೋಗವು ಥಾಣೆ ಮತ್ತು ಕೊಂಕಣ ಪ್ರದೇಶದ ರೈಲ್ವೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸಚಿವರೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲನ್ನು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ ಮಾರ್ಗಗಳಲ್ಲಿ ಇತ್ತೀಚೆಗೆ ಪರಿಚಯಿಸಿದ್ದು, ಈಗ ಮುಂಬೈ ಮತ್ತು ಗೋವಾ ನಡುವೆ ಚಾಲನೆ ಮಾಡಲಾಗುವುದು ಎಂದಿದ್ದಾರೆ