ಶಿವಲಿಂಗಾಪುರಂ ಬಳಿ ಹಳಿ ತಪ್ಪಿದ 11 ಬೋಗಿಗಳ ಗೂಡ್ಸ್​ ಟ್ರೈನ್​ : ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ

ಶಿವಲಿಂಗಾಪುರಂ ಬಳಿ ಹಳಿ ತಪ್ಪಿದ 11 ಬೋಗಿಗಳ ಗೂಡ್ಸ್​ ಟ್ರೈನ್​ : ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ

ಡಿಶಾ : ಆಂಧ್ರಪ್ರದೇಶದ ಶಿವಲಿಂಗಾಪುರಂ ಸಮೀಪ ಗುರುವಾರ ಬೆಳಗ್ಗೆ 11 ಬೋಗಿಗಳ ಗೂಡ್ಸ್​ ಹೊಂದಿದ್ದ ರೈಲು ಹಳಿ ತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಮುಂಜಾನೆ 2.50ರ ನಸುಕಿನ ಸಮಯದಲ್ಲಿ ಗೂಡ್ಸ್​ ರೈಲು ಅರಕುನಿಂದ ಕೊಥಾವಲಸ ಕಡೆಗೆ ಸಾಗುತ್ತಿದ್ದಾಗ ರೈಲು ಹಳಿ ತಪ್ಪಿದ ಹಿನ್ನೆಲೆ ಕೊರಾಪುಟ್​ ಮಾರ್ಗವಾಗಿ ತೆರಳುವ ವಿಶಾಖಪಟ್ಟಣ- ಜಗದಲ್ಪುರ್​ ಪ್ಯಾಸೆಂಜರ್​ ರೈಲು ಸಂಚಾರ ರದ್ದುಗೊಂಡಿದೆ.

ಯಾವುದೇ ಹಾನಿ ಸಂಭವಿಸಿಲ್ಲ. ರಕ್ಷಣಾ ತಂಡ, ತಾಂತ್ರಿಕ ತಂಡ, ಎಲೆಕ್ಟ್ರಿಕಲ್ ವಿಭಾಗ ಮತ್ತು ರೈಲ್ವೆ ಇಲಾಖೆ ತಂಡ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಈ ಸಂಬಂಧ ತನಿಖೆ ಶುರು ಮಾಡಿದೆ.

ಇನ್ನು ಹಳಿ ತಪ್ಪಿದ ಸ್ಥಳಕ್ಕೆ ಕೂಡಲೇ, ವಿಶಾಖ ಪಟ್ಟಣಂನಿಂದ ಕೂಡ ರಕ್ಷಣಾ ತಂಡ ಧಾವಿಸಿದ್ದು. ಈ ಅಪಘಾತದಿಂದ ಹಾನಿಗೊಳಗಾದ ಹಳಿಗಳನ್ನು ಸರಿಪಡಿಸಿ, ಸಾಧ್ಯವಾದಷ್ಟು ಬೇಗ ರೈಲು ಸೇವೆಗಳನ್ನು ಪುನಾರಂಭಿಸಲು ಪ್ರಯತ್ನಿಸುತ್ತೇವೆ ಎಂದು ಮೂಲಗಳು ತಿಳಿಸಿವೆ.