ಬಾಗಲಕೋಟೆಯಲ್ಲಿ ಘೋರ ದುರಂತ : ಕಾಲುವೆಯಲ್ಲಿ ಮುಳುಗಿ ಇಬ್ಬರು ಸಾವು

ಬಾಗಲಕೋಟೆಯಲ್ಲಿ ಘೋರ ದುರಂತ : ಕಾಲುವೆಯಲ್ಲಿ ಮುಳುಗಿ ಇಬ್ಬರು ಸಾವು

ಬಾಗಲಕೋಟೆ : ಬಟ್ಟೆ ತೊಳೆಯಲು ಕಾಲುವೆಗೆ ಇಳಿದಿದ್ದ ಇಬ್ಬರು ನೀರು ಪಾಲಾದ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಬಳಿ ಕೆಬಿಜೆಎನ್ ಎಲ್ ಕಾಲುವೆಯಲ್ಲಿ ನಡೆದಿದೆ.

ಮೃತರನ್ನು ರಸೂಲ್ ಮಾಲದಾರ (25) ಸಮೀವುಲ್ಲಾ ಗೊಳಸಂಗಿ (10) ಎಂದು ಗುರುತಿಸಲಾಗಿದೆ.

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೃತರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರು ಎಂದು ಗುರುತಿಸಲಾಗಿದೆ. ಬಟ್ಟೆ ಒಗೆಯಲು ತೆರಳಿದ್ದಾಗ ಒಬ್ಬರು ಕಾಲುವೆಗೆ ಬಿದ್ದಿದ್ದು, ಒಬ್ಬರನ್ನು ರಕ್ಷಿಸಲು ಹೋಗಿ ಇನ್ನೊಬ್ಬರು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.