ವಿದೇಶಿ ಪ್ರಯಾಣಿಕರಿಗೆ ಬಿಗ್‌ ಶಾಕ್ :‌ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ರಷ್ಟೇ ಎಂಟ್ರಿ : ಸಚಿವ ಡಾ.ಸುಧಾಕರ್‌

ವಿದೇಶಿ ಪ್ರಯಾಣಿಕರಿಗೆ ಬಿಗ್‌ ಶಾಕ್ :‌ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ರಷ್ಟೇ ಎಂಟ್ರಿ : ಸಚಿವ ಡಾ.ಸುಧಾಕರ್‌

ಬೆಂಗಳೂರು : ರಾಜ್ಯದಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯ ಬರುವ ವಿದೇಶಿ ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಬಿಗ್‌ ಶಾಕ್ ಎದುರಾಗಿದ್ದು, ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ರಷ್ಟೇ ಎಂಟ್ರಿ ಎಂದು ಆರೋಗ್ಯ ಸಚಿವ ಡಾ.

ಸುಧಾಕರ್‌ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.ಮಾಧ್ಯಮಗಳೊಂದಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಮಾತನಾಡಿ, ಚೀನಾದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ರಾಜ್ಯದಲ್ಲೂ ಕೊರೊನಾ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದ್ದು ಬೇರೆ ದೇಶಗಳಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದೆ ಆ ನಿಟ್ಟಿನಲ್ಲಿ ಕರ್ನಾಟಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಬೇಕಾಗಿದೆ. ಮಾಸ್ಕ್‌ ಕಡ್ಡಾಯ ಧರಿಸಬೇಕಾಗಿದೆ ಅಷ್ಟೇ ಅಲ್ಲದೆ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಇದ್ದರೆ ಮಾರ್ಗ ಅವರಿಗೆ ಬರೋದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿದೇಶಿ ಪ್ರಯಾಣಿಕರು ಎಂಟ್ರಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಿಲ್ಲಿ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿಯನ್ನು ರಿಲೀಸ್‌ ಮಾಡಲಾಗಿದೆ

ಏರ್‌ಪೋರ್ಟ್‌ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತಾ? :

ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಶೇ. 2ರಷ್ಟು ಪ್ರಯಾಣಿಕರಿಗೆ ರ‍್ಯಾಂಡಮ್ ಕೋವಿಡ್‌ ಟೆಸ್ಟ್ (ಗಂಟಲು ದ್ರವ ನೀಡಿ ಏರ್ಪೋರ್ಟ್‌ನಿಂದ ಹೊರಗೆ ಬರತಕ್ಕದ್ದು) ಮಾಡಲಾಗಿದೆ. ರೋಗ ಲಕ್ಷಣಗಳು ಕಂಡುಬರುವ ಪ್ರಯಾಣಿಕರು ತತ್‌ಕ್ಷಣ ಐಸೋಲೇಷನ್ ಆಗಬೇಕು. 12 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಅಲ್ಲ. ರೋಗ ಗುಣ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರು ಸ್ವಯಂ ನಿಗಾವಹಿಸಲು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ