ರಂಜಾನ್: ಸೌದಿ ನಿರ್ಬಂಧಗಳಿಗೆ ಮುಸ್ಲಿಮರ ಅಸಮಾಧಾನ

ರಿಯಾದ್: ಮಾ.22ರಿಂದ ಆರಂಭವಾಗುವ ರಂಜಾನ್ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸೌದಿ ಅರೇಬಿಯಾ ಹೊರಡಿಸಿರುವ ನೂತನ ನಿರ್ಬಂಧಗಳು ಜಗತ್ತಿನಾದ್ಯಂತ ಮುಸ್ಲಿಮರ ಅಸಮಾಧಾನಕ್ಕೆ ಕಾರಣವಾಗಿದೆ.
ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೊರಡಿಸಿರವ ನಿಯಮಗಳ ಪ್ರಕಾರ, ರಂಜಾನ್ ತಿಂಗಳಲ್ಲಿ ಮಸೀದಿಗಳು ದಾನ ಪಡೆಯುವುದನ್ನು ನಿಷೇಧಿಸಲಾಗಿದೆ.
ಮೆಕ್ಕಾ ಮತ್ತು ಮದೀನಾ ಹೊರತುಪಡಿಸಿ, ಉಳಿದೆಡೆ ಧ್ವನಿವರ್ಧಕಗಳ ಬಳಕೆಗೆ ಮಿತಿ ಇರಬೇಕು. ಪ್ರಾರ್ಥನೆಯನ್ನು ಪ್ರಸಾರ ಮಾಡುವಂತಿಲ್ಲ. ಮಸೀದಿಗೆ ಬರುವ ಪ್ರತಿಯೊಬ್ಬರೂ ಐಡಿ ಕಾರ್ಡ್ ಹೊಂದಿರಬೇಕು.
ಪ್ರಾರ್ಥನೆ ಅವಧಿ ಕಡಿಮೆ ಇರಬೇಕು. ಪ್ರಾರ್ಥನೆ ಸಮಯದ ಫೋಟೋಗಳನ್ನು ಕ್ಲಿಕ್ಕಿಸುವಂತಿಲ್ಲ. ಉಪವಾಸ ಇರುವವರಿಗೆ ಆಹಾರ ವಿತರಣೆಗಾಗಿ ನಿಧಿ ಸಂಗ್ರಹಿಸುವಂತಿಲ್ಲ. ಇಫ್ತಾರ್‌ಗಾಗಿ ತಾತ್ಕಾಲಿಕ ಟೆಂಟ್ ಅಥವಾ ಕೊಠಡಿಗಳನ್ನು ತೆರೆಯುವಂತಿಲ್ಲ. ಸೂಕ್ತ ಐಡಿ ಕಾರ್ಡ್ ಇಲ್ಲದೇ ಇತ್ತಿಕಾಫ್ಗೆ ಯಾರಿಗೂ ಪ್ರವೇಶ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಇದಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.