125 ಹೆಸರಿಗೆ ಸಮ್ಮತಿ; ಕೆಲವು ಕ್ಷೇತ್ರ ಹೊರತುಪಡಿಸಿ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತ

125 ಹೆಸರಿಗೆ ಸಮ್ಮತಿ; ಕೆಲವು ಕ್ಷೇತ್ರ ಹೊರತುಪಡಿಸಿ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹಂತದಲ್ಲಿ 123 ರಿಂದ 125 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಆದರೆ ಯಾರಿಗೆ ಯುಗಾದಿಯ ಬೇವು-ಬೆಲ್ಲ ಎಂಬುದು ಮಾತ್ರ ನಿಗೂಢವಾಗಿದೆ.

ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆ ಆಗುವುದು ವಿಳಂಬವಾಗಲಿದೆ. ಇದು ಟಿಕೆಟ್‌ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿಯು 3 ಗಂಟೆಗೂ ಹೆಚ್ಚು ಕಾಲ ಸುದೀರ್ಘ‌ ಸಭೆ ನಡೆಸಿ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡಿದ್ದ ಅಭ್ಯರ್ಥಿಗಳ ಪಟ್ಟಿ ಕುರಿತು ವ್ಯಾಪಕ ಚರ್ಚೆ ನಡೆಸಿತು. ಕಾಂಗ್ರೆಸ್‌ನ 69 ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಹಾಲಿಗಳಿಗೂ ಟಿಕೆಟ್‌ ಖಾತರಿಯಾಗಿದೆ. ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್‌ಗೆ ಮಹದೇವಪುರದಿಂದ ಟಿಕೆಟ್‌ ಖಚಿತಪಡಿಸಲಾಗಿದೆ.

ಇದರ ಜತೆಗೆ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಸಿಂಗಲ್‌ ನೇಮ್‌ ಶಿಫಾರಸು ಆಗಿದ್ದ 60 ರಿಂದ 65 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ವ್ಯಾಪಕ ಚರ್ಚೆ ನಡೆಸಿದ ಬಳಿಕ ಪಟ್ಟಿಗೆ ಸಮ್ಮತಿ ನೀಡಲಾಗಿದೆ. ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಕೈಗೆತ್ತಿಗೊಳ್ಳಲು ತೀರ್ಮಾನಿಸಲಾಗಿದೆ. ರಾಹುಲ್‌ಗಾಂಧಿ ಅವರು ಇದೇ 20 ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವುದರಿಂದ ಆ ಕಾರ್ಯಕ್ರಮದ ಬಳಿಕ ಇಲ್ಲವೇ ಯುಗಾದಿ ಹಬ್ಬದ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೊಸ ಮುಖಗಳಿಗೆ ಅವಕಾಶ:
ಖರ್ಗೆ, ರಾಹುಲ್‌ ಗಾಂಧಿ ಅವರ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುಜೇìವಾಲ, ಕೆ.ಸಿ.ವೇಣುಗೋಪಾಲ್‌, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲೂ ಕೆಲವೊಂದು ಕಡೆ ಜೆಡಿಎಸ್‌, ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವುದರ ಬಗ್ಗೆಯೂ ಚರ್ಚೆ ನಡೆಸಿದೆ. ಅಂಥ ಕ್ಷೇತ್ರಗಳಲ್ಲಿ ಈ ಹಂತದಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಹೊರಟರೆ ಹಿನ್ನಡೆ ಆಗಬಹುದೆಂಬ ಅತಂಕವೂ ವ್ಯಕ್ತವಾಗಿದೆ. ಜತೆಗೆ ಈಗಾಗಲೇ ಹಲವು ಕಾರಣಗಳಿಂದ ಟಿಕೆಟ್‌ ಇಲ್ಲವೆಂದು ಸೂಚ್ಯವಾಗಿ ಹೇಳಿರುವ ಐದಾರು ಶಾಸಕರ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಒಗ್ಗಟ್ಟು ಪ್ರದರ್ಶನ
ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಆಯ್ಕೆಯಲ್ಲಿ ಇಬ್ಬರೂ ಒಟ್ಟಾಗಿ ತೀರ್ಮಾನ ಕೈಗೊಂಡಿದ್ದಾರೆ. ಖರ್ಗೆ ಅವರು ಹೆಚ್ಚಿನ ಆಯ್ಕೆಯನ್ನು ರಾಜ್ಯ ಮುಖಂಡರ ವಿವೇಚನಗೆ ಬಿಟ್ಟರೆಂದು ತಿಳಿದುಬಂದಿದೆ. ಉಳಿದರೆ ರಾಹುಲ್‌ ಅವರು ಡಿಕೆಶಿ-ಸಿದ್ದು ಪಟ್ಟಿಗೆ ಸಮ್ಮತಿ ನೀಡಿದ್ದಾರೆ. ಸಭೆಯಲ್ಲಿದ್ದ ಇತರೆ ನಾಯಕರ ಮಾತಿಗೂ ಮನ್ನಣೆ ದೊರಕಲಿಲ್ಲ ಎನ್ನಲಾಗಿದೆ. ಸಭೆ ಅಂತ್ಯಗೊಳ್ಳುವುದಕ್ಕೂ ಮೊದಲೇ ವೀರಪ್ಪ ಮೊಯ್ಲಿ ಅವರು ಹೊರ ನಡೆದಿರುವುದು ಅಚ್ಚರಿ ತಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಸೂಚಿಸಿದರೂ ಕುಲಕರ್ಣಿ ಅವರು ಆಸಕ್ತಿ ತೋರಿಲ್ಲ. ಕೋರ್ಟ್‌ ಸಮಸ್ಯೆಗಳು ಬಗೆಹರಿಯುವ ವಿಶ್ವಾಸದಲ್ಲಿರುವ ಅವರು ಧಾರವಾಡದಿಂದಲೇ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಒಂದು ವೇಳೆ ಕೋರ್ಟ್‌ ಸಮಸ್ಯೆ ಇತ್ಯರ್ಥವಾಗದಿದ್ದರೆ ತಮ್ಮ ಪತ್ನಿಯನ್ನು ಕಣಕ್ಕಿಳಿಸುವ ಯೋಚನೆಯಲ್ಲಿ ದ್ಧಾರೆ. ಹೀಗಾಗಿ ಆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮುಂದಿನ ಹಂತಕ್ಕೆ ಹೋಗಿದೆ.

2ನೆ ಸುತ್ತಿನ ಸಭೆ
ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಖರ್ಗೆ ಅವರೊಂದಿಗೆ ರಾಜ್ಯ ನಾಯಕರು ಹಾಗೂ ನವದೆಹಲಿಯ ಕೆಲವು ಹಿರಿಯ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ಪಟ್ಟಿಗೆ ಅಂತಿಮ ರೂಪ ನೀಡಿದ್ದಾರೆ. ಈ ಸಭೆಯ ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳೇ ದಂಡು ದಿಲ್ಲಿಯಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟು ದಿಲ್ಲಿ ನಾಯಕರ ಮೇಲೆ ಒತ್ತಡ ತರುವ ಕೆಲಸದಲ್ಲಿ ಮಗ್ನರಾಗಿದ್ದರು.

ಟಿಕೆಟ್‌ ಖಚಿತಪಟ್ಟ ಮುಖಂಡರು
ಮಾಜಿ ಶಾಸಕರಾದ ಫಿರೋಜ್‌ ಶೇಠ್-ಬೆಳಗಾವಿ ಉತ್ತರ, ಅಶೋಕ ಪಟ್ಟಣ-ರಾಮದುರ್ಗ, ಉಮಾಶ್ರೀ-ತೇರದಾಳ, ಜಿ.ಟಿ.ಪಾಟೀಲ್‌-ಬೀಳಗಿ, ವಿಜಯಾನಂದ ಕಾಶಪ್ಪನವರ್‌-ಹುನಗುಂದ, ಡಾ.ಶರಣ ಪ್ರಕಾಶ್‌ ಪಾಟೀಲ್‌-ಸೇಡಂ, ಬಿ.ಆರ್‌. ಪಾಟೀಲ್‌ -ಆಳಂದ, ಲಿಂಗಸುಗೂರು-ರುದ್ರಯ್ಯ, ಹಂಪನಗೌಡ ಬಾದರ್ಲಿ- ಸಿಂಧನೂರು, ಶಿವರಾಜ ತಂಗಡಗಿ-ಕನಕಗಿರಿ, ಬಸವರಾಜ ರಾಯರೆಡ್ಡಿ-ಯಲಬುರ್ಗಾ, ಧಾರವಾಡ ಪೂರ್ವ- ಮೋಹನ ಲಿಂಬಿಕಾಯಿ, ಸಂತೋಷ್‌ ಲಾಡ್‌-ಕಲಘಟಗಿ, ಸತೀಶ್‌ ಸೈಲ್‌-ಕಾರವಾರ, ನಿವೇದಿತಾ ಆಳ್ವ- ಕುಮಟಾ, ಭೀಮಣ್ಣ ನಾಯಕ-ಸಿರಸಿ, ವಿ.ಎಸ್‌.ಪಾಟೀಲ್‌- ಯಲ್ಲಾಪುರ, ಯು.ಬಿ.ಬಣಕಾರ- ಹಿರೇಕೆರೂರು, ಪ್ರಕಾಶ ಕೋಳಿವಾಡ- ರಾಣೆಬೆನ್ನೂರು, ಪ್ರಸನ್ನಕುಮಾರ್‌- ಶಿವಮೊಗ್ಗ, ಮಧು ಬಂಗಾರಪ್ಪ-ಸೊರಬ, ಗೋಪಾಲ ಪೂಜಾರಿ-ಬೈಂದೂರು, ವೈ.ಎಸ್‌.ವಿ.ದತ್ತ- ಕಡೂರು, ಕಿರಣ್‌ಕುಮಾರ್‌-ಚಿಕ್ಕನಾಯಕನಹಳ್ಳಿ, ಟಿ.ಬಿ.ಜಯಚಂದ್ರ-ಶಿರಾ, ಶ್ರೀನಿವಾಸ್‌ -ಗುಬ್ಬಿ, ರಾಜಣ್ಣ-ಮಧುಗಿರಿ, ಡಾ.ಎಂ.ಸಿ.ಸುಧಾಕರ್‌-ಚಿಂತಾಮಣಿ, ಕುಸುಮಾ ಹನುಮಂತರಾಯಪ್ಪ-ರಾಜರಾಜೇಶ್ವರಿನಗರ ಹಾಗೂ ಗಣೇಶ್‌ ಪ್ರಸಾದ್‌-ಗುಂಡ್ಲುಪೇಟೆ, ಯು.ಬಿ. ವೆಂಕಟೇಶ್‌- ಬಸವನಗುಡಿ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಹಾಲಿಗಳಿಗೆ ಗ್ಯಾರೆಂಟಿ
*ಡಿ.ಕೆ.ಶಿವಕುಮಾರ್‌ - ಕನಕಪುರ
*ಸಿದ್ದರಾಮಯ್ಯ-ಕೋಲಾರ
*ಎಂ.ಬಿ.ಪಾಟೀಲ್‌- ಬಬಲೇಶ್ವರ
*ಸತೀಶ್‌ ಜಾರಕಿಹೊಳಿ- ಯಮಕನಮರಡಿ
* ಈಶ್ವರ್‌ ಖಂಡ್ರೆ- ಭಾಲ್ಕಿ
*ಆರ್‌.ವಿ.ದೇಶಪಾಂಡೆ- ಹಳಿಯಾಳ
*ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ
*ಎಚ್‌.ಕೆ.ಪಾಟೀಲ್‌- ಗದಗ
*ಡಾ.ಜಿ.ಪರಮೇಶ್ವರ್‌- ಕೊರಟಗೆರೆ
*ರಮೇಶ್‌ಕುಮಾರ್‌- ಶ್ರೀನಿವಾಸಪುರ
*ಕೆ.ಜೆ.ಜಾರ್ಜ್‌- ಸರ್ವಜ್ಞನಗರ
*ರಾಮಲಿಂಗಾರೆಡ್ಡಿ- ಬಿಟಿಎಂ ಲೇ ಔಟ್‌
*ಪ್ರಿಯಾಂಕ್‌ ಖರ್ಗೆ- ಚಿತ್ತಾಪುರ
*ಗಣೇಶ್‌ ಪ್ರಕಾಶ್‌ ಹುಕ್ಕೇರಿ- ಚಿಕ್ಕೋಡಿ-ಸದಲಗ
*ಲಕ್ಷ್ಮಿ ಹೆಬ್ಟಾಳ್ಕರ್‌- ಬೆಳಗಾವಿ ಗ್ರಾಮಾಂತರ
*ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್‌- ಖಾನಾಪುರ
*ಕೌಜಲಗಿ ಮಹಾಂತೇಶ್‌ ಶಿವಾನಂದ್‌- ಬೈಲಹೊಂಗಲ
* ಆನಂದ್‌ ನ್ಯಾಮಗೌಡ-ಜಮಖಂಡಿ
*ಶಿವಾನಂದ ಪಾಟೀಲ್‌- ಬಸವನಬಾಗೇವಾಡಿ
*ಅಜಯ್‌ ಧರ್ಮಸಿಂಗ್‌- ಜೇವರ್ಗಿ
*ಶರಣ ಬಸಪ್ಪ ದರ್ಶನಾಪುರ್‌- ಶಹಾಪುರ
*ರಾಜಶೇಖರ್‌ ಪಾಟೀಲ್‌- ಹುಮ್ನಾಬಾದ್‌
*ರಹೀಂ ಖಾನ್‌- ಬೀದರ್‌
*ಬಸನಗೌಡ ದದ್ದಲ್‌- ರಾಯಚೂರು ಗ್ರಾಮಾಂತರ
*ಬಸನಗೌಡ ತುರವಿಹಾಳ್‌- ಮಸ್ಕಿ
*ಅಮರೇಗೌಡ ಬಯ್ನಾಪುರ- ಕುಷ್ಟಗಿ
*ರಾಘವೇಂದ್ರ ಹಿಟ್ನಾಳ್‌- ಕೊಪ್ಪಳ
*ಅಬ್ಬಯ್ಯ ಪ್ರಸಾದ್‌- ಹುಬ್ಬಳ್ಳಿ -ಧಾರವಾಡ ಪೂರ್ವ
*ಶ್ರೀನಿವಾಸ ಮಾನೆ- ಹಾನಗಲ್‌
*ಟಿ.ಪಿ.ಪರಮೇಶ್ವರ್‌ ನಾಯ್ಕ- ಹಡಗಲಿ
*ಭೀಮಾ ನಾಯ್ಕ- ಹಗರಿ ಬೊಮ್ಮನಹಳ್ಳಿ
*ಜಿ.ಎನ್‌.ಗಣೇಶ್‌- ಕಂಪ್ಲಿ
*ಬಿ.ನಾಗೇಂದ್ರ- ಬಳ್ಳಾರಿ
*ತುಕಾರಾಂ-ಸಂಡೂರು
*ಟಿ.ರಘುಮೂರ್ತಿ- ಚಳ್ಳಕೆರೆ
*ಬಿ.ಕೆ.ಸಂಗಮೇಶ್‌- ಭದ್ರಾವತಿ
*ಟಿ.ಡಿ.ರಾಜೇಗೌಡ- ಶೃಂಗೇರಿ
*ಎಚ್‌.ಡಿ.ರಂಗನಾಥ್‌- ಕುಣಿಗಲ್‌
*ಶಿವಶಂಕರರೆಡ್ಡಿ-ಗೌರಿಬಿದನೂರು
*ಎಸ್‌.ಎಸ್‌.ಸುಬ್ಟಾರೆಡ್ಡಿ- ಬಾಗೇಪಲ್ಲಿ
*ರೂಪಕಲಾ- ಕೆಜಿಎಫ್
*ನಾರಾಯಣಸ್ವಾಮಿ- ಬಂಗಾರಪೇಟೆ
*ನಂಜೇಗೌಡ- ಮಾಲೂರು
*ಕೃಷ್ಣ ಬೈರೇಗೌಡ- ಬ್ಯಾಟರಾಯನಪುರ
*ಬೈರತಿ ಸುರೇಶ್‌- ಹೆಬ್ಟಾಳ
*ಅಖಂಡ ಶ್ರೀನಿವಾಸಮೂರ್ತಿ- ಪುಲಕೇಶಿನಗರ
*ರಿಜ್ವಾನ್‌ ಅರ್ಷದ್‌- ಶಿವಾಜಿನಗರ
*ಎನ್‌.ಎ.ಹ್ಯಾರೀಸ್‌- ಶಾಂತಿನಗರ
*ಸೌಮ್ಯರೆಡ್ಡಿ- ಜಯನಗರ
*ಶಿವಣ್ಣ- ಆನೇಕಲ್‌
*ಶರತ್‌ ಬಚ್ಚೇಗೌಡ- ಹೊಸಕೋಟೆ
*ಟಿ.ವೆಂಕಟರಮಣಯ್ಯ- ದೊಡ್ಡಬಳ್ಳಾಪುರ
*ಯು.ಟಿ.ಖಾದರ್‌- ಮಂಗಳೂರು
*ಎಚ್‌.ಪಿ.ಮಂಜುನಾಥ್‌- ಹುಣಸೂರು
*ಅನಿಲ್‌ ಚಿಕ್ಕಮಾದು- ಎಚ್‌.ಡಿ.ಕೋಟೆ
*ಯತೀಂದ್ರ ಸಿದ್ದರಾಮಯ್ಯ-ವರುಣಾ
*ಸಿ.ಪುಟ್ಟರಂಗಶೆಟ್ಟಿ-ಚಾಮರಾಜನಗರ

ಹಾಲಿಗಳಲ್ಲಿ ಡೌಟ್‌
*ಎಂ.ವೈ.ಪಾಟೀಲ್‌- ಅಫ‌ಲಪುರ
*ವೆಂಕಟರಮಣಪ್ಪ- ಪಾವಗಡ
*ಕನೀಜ್‌ ಫಾತೀಮಾ- ಕಲಬುರಗಿ ಉತ್ತರ
*ಕುಸುಮಾ ಶಿವಳ್ಳಿ- ಕುಂದಗೋಳ
*ವಿ.ಮುನಿಯಪ್ಪ- ಶಿಡ್ಲಘಟ್ಟ
*ಡಿ.ಎಸ್‌.ಹೊಲಗೇರಿ- ಲಿಂಗಸಗೂರು
*ತನ್ವೀರ್‌ ಸೇಠ್ - ನರಸಿಂಹರಾಜ
*ಎಸ್‌.ರಾಮಪ್ಪ- ಹರಿಹರ