ಭಾರತ್‌ ಜೋಡೋ ಯಾತ್ರೆ: ಮೊದಲ ಬಾರಿಗೆ ಜರ್ಕಿನ್‌ ಧರಿಸಿದ ರಾಹುಲ್‌ ಗಾಂಧಿ

ಭಾರತ್‌ ಜೋಡೋ ಯಾತ್ರೆ: ಮೊದಲ ಬಾರಿಗೆ ಜರ್ಕಿನ್‌ ಧರಿಸಿದ ರಾಹುಲ್‌ ಗಾಂಧಿ

ಶ್ರೀನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಜಮ್ಮು ಪ್ರವೇ ಶಿಸುವ ಮೂಲಕ ಅಂತಿಮ ಹಂತಕ್ಕೆ ಕಾಲಿಟ್ಟಿದೆ.

ತೀವ್ರ ಚಳಿಯಲ್ಲೂ ಉತ್ತರ ಭಾರತದಾದ್ಯಂತ ಬರೀ ಟೀ-ಶರ್ಟ್‌ನಲ್ಲಿದ್ದ ರಾಹುಲ್‌, ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚಳಿಯ ತೀವ್ರತೆ ಹೆಚ್ಚಿದ್ದರೂ, ಟೀ -ಶರ್ಟ್‌ನಲ್ಲೇ ಯಾತ್ರೆ ಮುಂದುವರಿಸಿದ್ದ ರಾಹುಲ್‌ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಜಮ್ಮು ಪ್ರವೇಶಿಸುತ್ತಿದ್ದಂತೆ ಅವರು ಜಾಕೆಟ್‌ ಧರಿಸಿದ್ದಾರೆ ಎನ್ನಲಾಗಿತ್ತು. ಆದರೆ ರಾಹುಲ್‌ ಧರಿಸಿರುವ ಜಾಕೆಟ್‌ ಚಳಿ ತಡೆಯುವಂಥದಲ್ಲ, ಜಮ್ಮುವಿನಲ್ಲಿ ಹಿಮಮಳೆಯಾಗುತ್ತಿರುವ ಕಾರಣ, ರೈನ್‌ ಕೋಟ್‌ ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ಜಮ್ಮು ಪ್ರವೇಶಿಸಿರುವ ರಾಹುಲ್‌ಗೆ ಭರ್ಜರಿ ಸ್ವಾಗತ ದೊರೆತಿದ್ದು, ಕಾಶ್ಮೀರದ ಹಿರಿಯ ನಾಯಕರಾದ ಫಾರುಕ್‌ ಅಬ್ದುಲ್ಲಾ, ಶಿವ  ಸೇನೆ ಸಂಸದ ಸಂಜಯ್‌ ರಾವತ್‌ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬನಿ ಹಾಲ್‌ ಜಿಲ್ಲೆಯಲ್ಲಿ ಜ.25ರಂದು ರಾಹುಲ್‌ ಧ್ವಜಾರೋಹಣ ಮಾಡಲಿದ್ದು, ಜ.27ರಂದು ಶ್ರೀನಗರ ಪ್ರವೇಶಿಸಲಿದ್ದಾರೆ.