ಕೊನೆಯ ದಿನದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ‌ ಸಿದ್ದತೆ

ಕೊನೆಯ ದಿನದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ‌ ಸಿದ್ದತೆ

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಇಂದು ಸಂಭ್ರಮದ‌ ತೆರೆ ಬೀಳಲಿದ್ದು, ಕೊನೆಯ ದಿನದಂದು ಮಹಾ ದಾಸೋಹ ಭವನದಲ್ಲಿ ದಾಸೋಹ ಸಿದ್ದತಾ ಕಾರ್ಯ ನಡೆದಿದೆ.

ಪ್ರತಿ ವರ್ಷವೂ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ 15 ದಿನಗಳ ನಡೆಯಲಿದೆ. ಜ.8 ರಂದು ಮಹಾ ರಥೋತ್ಸವ ನಡೆದಿದೆ. ಮೂರು ದಿನಗಳ ಕಾಲ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡಿವೆ.

ಇಂದು ಅಮವಾಸ್ಯೆ ನಿಮಿತ್ತ ಜಾತ್ರೆ ಸಂಪನ್ನಗೊಳ್ಳಲಿದ್ದು ಶನಿವಾರ ಕೊನೆಯ ದಿನವಾಗಿದ್ದರಿಂದ ಲಕ್ಷಾಂತರ ಜನರು ಗವಿ ಮಠಕ್ಕೆ ಆಗಮಿಸಿ ಕತೃ ಗದ್ದುಗೆ ದರ್ಶನ ಪಡೆದು ಕಾಯಿ ಕರ್ಪೂರ ಅರ್ಪಣೆ ಮಾಡುತ್ತಾರೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ 15 ದಿನಗಳ ಕಾಲ ಮಹಾ ದಾಸೋಹದ ಸೇವೆ ನಿರಂತರ ನಡೆಯುತ್ತದೆ.

ಅದರಂತೆ ಶನಿವಾರ ದಾಸೋಹ ಭವನದಲ್ಲಿ ಸಿದ್ದಪಡಿಸಿದ ದಾಸೋಹವನ್ನು ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ವೀಕ್ಷಣೆ ಮಾಡಿ ಭಕ್ತರಿಗೆ ಪ್ರೋತ್ಸಾಹ ನೀಡಿದರು.