ಬಿಸಿ ತಟ್ಟದ ಹಲಾಲ್ ಮತ್ತು ಜಟ್ಕಾ ಕಟ್: ಎಂದಿನಂತೆ ವ್ಯಾಪಾರ

ಹುಬ್ಬಳ್ಳಿ: ಇಂದು ಯುಗಾದಿ ಹೊಸತೊಡಕು ಹಿನ್ನೆಲೆ ಹುಬ್ಬಳ್ಳಿಯಲ್ಲಿ ನಾನ್ ವೆಜ್ ಮಾರ್ಕೆಟ್ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹಳೇಹುಬ್ಬಳ್ಳಿ, ಗಣೇಶ ಪೇಟೆ, ಮ್ಯಾದಾರ ಓಣಿ, ಕಮರಿಪೇಟೆ ಮಟನ್ ಮಾರ್ಕೆಟ್ನಲ್ಲಿ ಮಟನ್, ಚಿಕನ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ನಮ್ಮ ಬಳಿ ಯಾರೂ ಕೂಡ ಹಲಾಲ್, ಜಟ್ಕಾ ಕಟ್ ಬಗ್ಗೆ ಕೇಳಿಲ್ಲ. ಗ್ರಾಹಕರು ಕೇಳಿದರೆ ಅವರಿಗೆ ಬೇಕಾದಂತೆ ಮಾಂಸ ಕೊಡುತ್ತೇವೆ. ಹಲಾಲ್, ಜಟ್ಕಾ ವಿಚಾರದ ಬಗ್ಗೆ ಗ್ರಾಹಕರ ಮುಂದೆ ಮಾತಾಡಲ್ಲ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಮಾಂಸ ಸಿದ್ಧ ಮಾಡಿಕೊಡ್ತೇವೆ. ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಂಸ ಖರೀದಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಎನ್ನದೇ ಎಲ್ಲರೂ ಮಾಂಸ ಖರೀದಿ ಮಾಡುತ್ತಿದ್ದಾರೆ ಎಂದು ನಸರೂಲ್ಲಾಖಾನ ಮಟನ್ ಸ್ಟಾಲ್ ಮಾಲೀಕ ಮಾಹಿತಿ ನೀಡಿದರು.
ಮತ್ತೋರ್ವ ಮಾಂಸ ವ್ಯಾಪಾರಿ ಅಲ್ತಾಫ್ ಈ ವರ್ಷ ವ್ಯಾಪಾರ ಇಲ್ಲ. ನಿನ್ನೆ, ಮೊನ್ನೆ ಹಬ್ಬದ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಆದರೆ ಬರುವ ಗ್ರಾಹಕರು ಜಾತಿ ಬೇಧ ಮಾಡದೇ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ.