ನಟಿ ಮಾಲಾಶ್ರೀಯ ಹಳೇ ಮೇಕಪ್ ಮ್ಯಾನ್ ಈಗ ವೃತ್ತಿಪರ ಕಳ್ಳ!

ಬೆಂಗಳೂರು: ಒಂದು ಕಾಲದಲ್ಲಿ ನಟಿ ಮಾಲಾಶ್ರೀ ಮೇಕಪ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಮನೆಕಳ್ಳ! ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿ ಸದ್ಯ ಬೇಗೂರು ಪೊಲೀಸರ ಅತಿಥಿಯಾಗಿದ್ದಾನೆ.
ನವಾಜ್ ಷರೀಫ್(53) ಬಂಧಿತ.
ಸುಮಾರು 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿದ್ದರೂ ಪ್ರತಿ ಬಾರಿ ಜಾಮೀನು ಪಡೆದು ಹೊರಬಂದು ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ವೃತ್ತಿಪರ ಖದೀಮನ ವಿರುದ್ಧ ಬೇಗೂರು ಠಾಣೆಯಲ್ಲಿ 10 ಸೇರಿ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಕನ್ನ ಕಳವು ಪ್ರಕರಣ ದಾಖಲಾಗಿವೆ.
ಕಳೆದ ಆರು ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಕಳ್ಳತನ ಕೃತ್ಯದಲ್ಲಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ ನವಾಜ್, ಮತ್ತೆ ಕಳ್ಳತನ ಕೃತ್ಯಗಳನ್ನ ಎಸಗುತ್ತಿದ್ದ. ಬೀಗ ಹಾಕಿದ್ದ ಸಣ್ಣಪುಟ್ಟ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಯ ಹೂ ಕುಂಡ, ಕಿಟಕಿಯಲ್ಲಿಕೀಯನ್ನು ಇರುವುದನ್ನು ಅರಿತು ಒಳನುಗ್ಗಿ ಕದಿ ಯು ತ್ತಿದ್ದ. ಕಳವು ವಸ್ತು ಮಾರಾಟ ಮಾಡಿ ಇಸ್ಪೀಟ್ ಹಾಗೂ ಮದ್ಯಪಾನ ಮಾಡಿ ವ್ಯಯಿಸುತ್ತಿದ್ದ.ಆರೋಪಿಯ ವಿಚಾರಣೆ ವೇಳೆ 25 ವರ್ಷಗಳ ಹಿಂದೆ ನಟಿ ಮಾಲಾಶ್ರೀಗೆ ಮೆಕಪ್‌ಮ್ಯಾನ್ ಆಗಿದ್ದೇ ಎಂದು ಹೇಳುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.