ಫ್ಲೈಟ್‌ ಅಟೆಂಡೆಂಟ್‌ಗೆ 3.12 ಕೋಟಿ ರೂ. ಸಂಬಳ

ಫ್ಲೈಟ್‌ ಅಟೆಂಡೆಂಟ್‌ಗೆ 3.12 ಕೋಟಿ ರೂ. ಸಂಬಳ

ಲಂಡನ್‌: ವಿಮಾನದಲ್ಲಿ ಕೆಲಸ ಮಾಡುವ ಫ್ಲೈಟ್‌ ಅಟೆಂಡೆಂಟ್‌ಗೆ ಹೆಚ್ಚೆಂದರೆ ಎಷ್ಟು ಸಂಬಳ ಇರಬಹುದು? ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ ಸರಾಸರಿ ವಾರ್ಷಿಕ 6 ಲಕ್ಷ ರೂ. ಇದೆ. ಆದರೆ, ಜಗತ್ತಿನ ಪ್ರಮುಖ ಒಟಿಟಿ ಪ್ಲಾಟ್‌ಫಾರಂ ಆಗಿರುವ ನೆಟ್‌ಫ್ಲೆಕ್ಸ್‌ ಕಂಪನಿ ಹೊಂದಿರುವ ವಿಮಾನವೊಂದಕ್ಕೆ ಫ್ಲೈಟ್‌ ಅಟೆಂಡೆಂಟ್‌ಗೆ ವಾರ್ಷಿಕ 3.12 ಕೋಟಿ ರೂ.

ವೇತನ ನೀಡುವ ಆಫ‌ರ್‌ ಮಾಡಿದೆ.

ಗ್ರಾಹಕರ ನಿರೀಕ್ಷೆಗಳನ್ನು ಅರಿತು, ಅದನ್ನು ಪೂರೈಸುವ ಹೊಣೆಗಾರಿಕೆ ಹೊಂದಿರಬೇಕು. ಜತೆಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸ್ವಯಂ ಪ್ರೇರಿತನಾಗಿ ಕೆಲಸ ಮಾಡುವ ಉತ್ಸಾಹದ ಜತೆಗೆ, ಮೇಲಿನ ಅಧಿಕಾರಿಗಳ ನಿರ್ದೇಶನವನ್ನು ಕಡಿಮೆ ಪ್ರಮಾಣದಲ್ಲಿ ಅವಲಂಬಿಸುವವನಾಗಿರಬೇಕು ಎಂದು ಷರತ್ತನ್ನು ನೆಟ್‌ಫ್ಲಿಕ್ಸ್‌ ಹಾಕಿದೆ.

ಅಂದ ಹಾಗೆ ಕೆಲಸ ಇರುವ ಸ್ಥಳ ಅಮೆರಿಕದ ಸ್ಯಾನ್‌ಜೋಸ್‌ನಲ್ಲಿ. ಜತೆಗೆ ಜಗತ್ತಿನಾದ್ಯಂತ ಪ್ರಯಾಣ ಮಾಡಲೂ ಸಿದ್ಧರಿರಬೇಕು ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.