ನಿಮ್ಮ ಜಾತಿಯೇನು, ಯಾರಿಗೆ ವೋಟ್ ಹಾಕ್ತೀರಿ' ಎಂದು ಕೇಳಿದ ಸಮೀಕ್ಷಾ ಸಿಬ್ಬಂದಿಗೆ ಹಳ್ಳಿ ಯುವಕನ ಕ್ಲಾಸ್

ನಿಮ್ಮ ಜಾತಿಯೇನು, ಯಾರಿಗೆ ವೋಟ್ ಹಾಕ್ತೀರಿ' ಎಂದು ಕೇಳಿದ ಸಮೀಕ್ಷಾ ಸಿಬ್ಬಂದಿಗೆ ಹಳ್ಳಿ ಯುವಕನ ಕ್ಲಾಸ್

ಬೆಂಗಳೂರು: ಚಿತ್ರನಟ ಉಪೇಂದ್ರ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ ಹೊಸತೊಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಖಾಸಗಿ ಸಂಸ್ಥೆಯೊಂದರ ವ್ಯಕ್ತಿಯೊಬ್ಬರು ಚುನಾವಣಾ ಸಮೀಕ್ಷೆಯ ನೆಪದಲ್ಲಿ ಯುವಕನೊಬ್ಬನ ಜಾತಿ, ಅವರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬಿತ್ಯಾದಿ ಮಾಹಿತಿಗಳನ್ನು ಕೇಳುತ್ತಾರೆ.

ಇದರಿಂದ ಕೆರಳಿದ ಯುವಕ ಆ ವ್ಯಕ್ತಿಯ ಪ್ರಶ್ನೆಗಳನ್ನು ಆಕ್ಷೇಪಿಸುತ್ತಾರೆ. ಈ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ, ನಿಮ್ಮ ಮತದ ವಿವರ ಗೌಪ್ಯವಾಡುವಂತೆ ಹಾಗೂ ಯಾರು, ಯಾರಿಗೆ ಮತ ಹಾಕುತ್ತಾರೆಂದು ಕೆದಕುವ ರಾಜಕೀಯ ಉದ್ದೇಶದ ಸಮೀಕ್ಷೆಗಳಿಂದ ದೂರ ಇರುವಂತೆ ಉಪೇಂದ್ರ ಅವರು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಇದು ಅಣಕು ವಿಡಿಯೋವಾ ಅಥವಾ ಯಾರೋ ಮೊಬೈಲ್ ನಲ್ಲಿ ಚಿತ್ರೀಕರಿಸಿದ ದೃಶ್ಯವನ್ನು ಇಲ್ಲಿ ಬಳಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮೂಲ ಸಂವಿಧಾನದ ಆಶಯದಂತೆ ಗೌಪ್ಯ ಮತದಾನವು ಪ್ರತಿಯೊಬ್ಬ ಮತದಾರನ ಹಕ್ಕು ಎಂದು ಹೇಳುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಮಾಡಲಾಗಿದೆ. ಇದರ ಕೆಳಗೆ ಉಪೇಂದ್ರ ಅವರು, ವ್ಯಾಪಾರಿ ರಾಜಕೀಯವನ್ನು ಕೆಳಗಿಳಿಸಿ. ಇಂಥ ಎಲ್ಲಾ ಸಮಸ್ಯೆಗಳಿಗೆ ಒಂದೇ ಒಂದು ಪರಿಹಾರ 'ಪ್ರಜಾಕೀಯ' ಎಂದು ಹೇಳಿದ್ದಾರೆ.