ಕೆ.ಆರ್.ಪೇಟೆ| ಬಿಜೆಪಿಯಿಂದಲೇ ಗೆದ್ದು ನಾಯಕತ್ವ ತೋರಿಸಲಿ: ನಾರಾಯಣಗೌಡ

ಕೆ.ಆರ್.ಪೇಟೆ: 'ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇರುವುದರಿಂದ ನನಗೆ ಆಹ್ವಾನ ಬಂದಿದೆ' ಎಂದು ಮಾಧ್ಯಮದವರೊಂದಿಗೆ ಮಾತನಾ ಡಿರುವ ಸಚಿವ ಕೆ.ಸಿ.ನಾರಾಯಣಗೌಡ ಅವರ ಹೇಳಿಕೆಯನ್ನು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಖಂಡಿಸಿದರು.
ಪಟ್ಟಣದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು, 'ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರು, ಕಾರ್ಯಕರ್ತರು ಇದ್ದಾರೆ.
ಪಟ್ಟಣದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು, 'ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರು, ಕಾರ್ಯಕರ್ತರು ಇದ್ದಾರೆ. ಬಿಜೆಪಿ ಹುಟ್ಟುವ ಮುನ್ನವೇ ತಾಲ್ಲೂಕಿನಲ್ಲಿ ಪಕ್ಷ ಹೆಮ್ಮರವಾಗಿತ್ತು. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಸಚಿವ ನಾರಾಯಣಗೌಡ ನಮ್ಮ ಪಕ್ಷದಲ್ಲಿ ನಾಯಕರ ಕೊರತೆ ಇದೆ ಎಂದು ಹೇಳಿರು ವುದು ಬಾಲಿಶವಾಗಿದೆ ಎಂದು ಅವರು ಹೇಳಿದರು.
ಸಚಿವ ನಾರಾಯಣಗೌಡ ಅವರು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಬಿಜೆಪಿಗೆ ಮಾರಾಟವಾಗಿ ಕಳೆದ ವಿಧಾನ ಸಭಾ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಬಿಜೆಪಿಯಿಂದ ಗೆದ್ದಿದ್ದಾರೆಯೇ ಹೊರತು ಬಿಜೆಪಿಯ ಸಾಮರ್ಥ್ಯದಿಂದ ಅಲ್ಲ. ಇಂಥ ಸಂಕಷ್ಟದ ಸಂದರ್ಭದಲ್ಲೂ ಕೆ.ಬಿ.ಚಂದ್ರಶೇಖರ್ ಸುಮಾರು 45 ಸಾವಿರ ಮತ ಗಳಿಸಿದ್ದಾರೆ. ತಾಲ್ಲೂಕಿಗೆ ₹ 1700 ಕೋಟಿ ಅನುದಾನ ತಂದಿದ್ದೇನೆ ಎನ್ನುವ ಸಚಿವರು ಸಮರ್ಥ ನಾಯಕರಾಗಿದ್ದರೆ ಅವರು ಈಗಿರುವ ಪಕ್ಷದಿಂದಲೇ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದರು.
ಮನ್‌ಮುಲ್ ನಿರ್ದೇಶಕ ಡಾಲು ರವಿ, ಪುರಸಭೆ ಸದಸ್ಯ ರವೀಂದ್ರ ಬಾಬು, ತಾ.ಪಂ.ಮಾಜಿ ಅಧ್ಯಕ್ಷ ಈಶ್ವರ ಪ್ರಸಾದ್, ದಲಿತ ಮುಖಂಡ ಬಸ್ತಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ರಾಮಕೃಷ್ಣೇಗೌಡ, ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕ ಅಧ್ಯಕ್ಷ ಆಯಾಜ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರುಕ್ಮಾಂಗದ, ಮುಖಂಡರಾದ, ಕೃಷ್ಣೇಗೌಡ, ಗಾಣದಹಳ್ಳಿ ಅಶೋಕ್, ಹೆಮ್ಮನಹಳ್ಳಿ ಸತೀಶ್, ಸಲ್ಲು, ಶಾಸಕರ ಮಾಜಿ ಆಪ್ತಸಹಾಯಕ ಬಸವೇಗೌಡ, ವಕೀಲ ನಾಗೇಶ್, ಅಗ್ರಹಾರಬಾಚಹಳ್ಳಿ ಕುಮಾರ್, ಕೆರೆಕೋಡಿ ಆನಂದ್, ತೆಂಡೆಕೆರೆ ದಿನೇಶ್, ರಜಿನಿ ಶಿವಾಜಿ, ಕೆ.ಬಿ.ಸಿ ಮಂಜು ಇದ್ದರು.