ಏರೋ ಶೋ'ದಿಂದ ಬಡತನ ನಿವಾರಣೆಯಾಗುತ್ತಾ? ಮಾಜಿ ಸಿಎಂ HDK ವ್ಯಂಗ್ಯ

ಏರೋ ಶೋ'ದಿಂದ ಬಡತನ ನಿವಾರಣೆಯಾಗುತ್ತಾ? ಮಾಜಿ ಸಿಎಂ HDK ವ್ಯಂಗ್ಯ

ಹುಬ್ಬಳ್ಳಿ : ಬಿಜೆಪಿಯವರು ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಏರೋ ಶೋ ಬಡತನ ನಿವಾರಣೆ ಮಾಡುವ ಕಾರ್ಯಕ್ರಮನಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ.

ಏರೋ ಶೋ ಬಡತನ ನಿವಾರಣೆ ಮಾಡುವ ಕಾರ್ಯಕ್ರಮನಾ? ಏರೋಶೋ ಮಾಡುವುದರಿಂದ ಬಡತನ ನಿವಾರಣೆಯಾಗುತ್ತಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿದೆ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ನಾನು ಪೇಶ್ವ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರ ಕೊಡುತ್ತಿಲ್ಲ. ಬ್ರಾಹ್ಮಣ ಸಿಎಂ ಆಗಬಾರದು ಎಂದು ನಾನು ಹೇಳಿಲ್ಲ. ರಾಜ್ಯದಲ್ಲಿ ಪೇಶ್ವೆ ಡಿಎನ್ ಎ ಸಿಎಂ ಆಗಬಾರದು ಎಂದು ಹೇಳಿದ್ದೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ, ಮೈತ್ರಿ ಸರ್ಕಾರ ಬಂದ 2 ತಿಂಗಳಲ್ಲೇ ಸರ್ಕಾರದ ಪತನದ ಬಗ್ಗೆ ಹೇಳಿದ್ದರು. ಬಿಜೆಪಿಯ ಅಕ್ರಮ ಹೊರತಂದಿದ್ದು ನಾನು. ಸಿದ್ದರಾಮಯ್ಯ ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲೇ ಮಾತನಾಡಿ, ಸಿದ್ದರಾಮಯ್ಯ ಕುರ್ಚಿಗಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.