75 ನೇ ಆಜಾದಿ ಕಾ ಅಮೃತ ಮಹೋತ್ಸವದ ಚಿತ್ರಪಟಗಳ ಪ್ರದರ್ಶನಕ್ಕೆ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಚಾಲನೆ | Dharwad |
ಧಾರವಾಡ ಇಂದು ಧಾರವಾಡದಲ್ಲಿ 75 ನೇ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಸತ್ಯಸಾಯಿ ವಿದ್ಯಾ ಮಂದಿರದ ಸಾಯಿ ಚರಣ ಆವರಣದಲ್ಲಿ ಚಿತ್ರಪಟಗಳ ಪ್ರದರ್ಶನಕ್ಕೆ ಶಿಕ್ಷಣಇಲಾಖೆಯ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರಿಂದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಾಗೂ ಅವರ ಸಂಕ್ಷಿಪ್ತ ಮಾಹಿತಿಯುಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಕ್ಕಳಿಂದ ಭಾರತದ ಸಂಸ್ಕೃತಿ, ಪುರಾತನ ಭಾರತೀಯ ಶಿಕ್ಷಣ ಪದ್ಧತಿ , ಕೃಷಿ ಮತ್ತು ತಂತ್ರಜ್ಞಾನ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ನಡೆದು ಬಂದ ಬಗೆಗಳ ಕುರಿತು ಚಿತ್ರಪಟಗಳು ಪ್ರದರ್ಶನಗೊಂಡವು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ವಯಸ್ಕರ ಶಿಕ್ಷಣಾಧಿಕಾರಿ ಎ.ಎಮ್ .ಖಾಜಿ, ಸತ್ಯಸಾಯಿ ಸಂಸ್ಥೆಯ ಪ್ರಾಚಾರ್ಯೆ ಶೀವಲಿಲಾ ಪೂರ್ವತಿ ಹಾಗೂ ಸತ್ಯ ಸಾಯಿ ಎಜ್ಯುಕೇಶನಲ್ ಟ್ರಸ್ಟ್ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.