ಸಾರ್ವಜನಿಕ ಸ್ಥಳ'ಗಳಲ್ಲಿ 'ಬ್ಯಾನರ್, ಬಂಟಿಂಗ್ಸ್' ಅಳವಡಿಸಲು ಈ ನಿಯಮಗಳ ಪಾಲನೆ ಕಡ್ಡಾಯ

ಸಾರ್ವಜನಿಕ ಸ್ಥಳ'ಗಳಲ್ಲಿ 'ಬ್ಯಾನರ್, ಬಂಟಿಂಗ್ಸ್' ಅಳವಡಿಸಲು ಈ ನಿಯಮಗಳ ಪಾಲನೆ ಕಡ್ಡಾಯ

ಹಾಸನ: ಚುನಾವಣೆ ಸಮೀಪಿಸುತ್ತಿದ್ದಂತೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬ್ಯಾನರ್ ಗಳದ್ದೇ ಕಾರುಬಾರಾಗಿದೆ. ಈ ಹಿನ್ನಲೆಯಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸೋದಕ್ಕೆ ಕಡಿವಾಣ ಹಾಕೋ ಸಂಬಂಧ, ಹಾಸನ ಜಿಲ್ಲಾಡಳಿತದಿಂದ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರುವಂತ ಹಾಸನ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು, ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬ್ಯಾನರ್ ಮತ್ತು ಬಟ್ಟೆ ಬಂಟಿಂಗ್ಸ್ ಗಳನ್ನು ( banner and bunting ) ಅಳವಡಿಸಲು ಈ ಕೆಳಕಂಡ ಷರತ್ತುಗಳನ್ನು ವಿಧಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ನಿಯಮಗಳನ್ನು ಪಾಲಿಸಿ, ಬ್ಯಾನರ್ ಅಳವಡಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅಳವಡಿಕೆಗೆ ಈ ನಿಯಮ ಕಡ್ಡಾಯ

  • ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು. ಇಲಾಖೆ ವಿಧಿಸುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಯಾವುದೇ ಪಕ್ಷ, ಧರ್ಮ, ಮತ, ಜಾತಿ ಅಥವಾ ವ್ಯಕ್ತಿಯ ಬಗ್ಗೆ ವೈಯಕ್ತಿಕ ತೇಜೋವಧೆಗೆ ಧಕ್ಕೆಯಾಗದಂತೆ ಬಟ್ಟೆ ಬ್ಯಾನರ್ ಮತ್ತು ಬಟ್ಟೆ ಬಂಟಿಂಗ್ಸ್ ಗಳನ್ನು ಅಳವಡಿಸುವುದು.
  • ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಬ್ಯಾನರ್ ಅಳವಡಿಸಬೇಕು.
  • ಯಾವುದೇ ಸಂದರ್ಭದಲ್ಲಿ ತಿಳುವಳಿಕೆ ನೀಡದೇ ಅನುಮತಿಯನ್ನು ರದ್ದುಪಡಿಸುವ, ಹಿಂಪಡೆಯುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಯು ಹೊಂದಿರುತ್ತದೆ.
  • ಬ್ಯಾನರ್, ಬಂಟಿಂಗ್ಸ್ ತೆಗೆಯುವಾಗ ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತೆ ವಹಿಸಬೇಕು. ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಅನುಮತಿ ಪಡೆದವರೇ ನೇರಹೊಣೆಗಾರನ್ನಾಗಿ ಮಾಡಲಾಗುವುದು.
  • ಯಾವುದೇ ರಸ್ತೆಗಳಿಗೆ ಅಡ್ಡಲಾಗಿ ಬಟ್ಟೆ ಬ್ಯಾನರ್, ಬಂಟಿಂಗ್ಸ್ ಕಟ್ಟುವಂತಿಲ್ಲ.
  • ದೊಡ್ಡ ಮರಗಳ ಮೇಲೆ ಹಾಗೂ ಹೈಮಾಸ್ಕ್ ವಿದ್ಯುತ್ ದೀಪದ ಕಂಬಗಳ ಮೇಲೆ ಬ್ಯಾನರ್, ಬಂಟಿಂಗ್ಸ್ ಕಟ್ಟುವಂತಿಲ್ಲ
  • ಅವಧಿ ಮುಗಿದ ನಂತ್ರ ಬ್ಯಾನರ್, ಬಂಟಿಂಗ್ಸ್ ತೆರವುಗೊಳಿಸಬೇಕು.
  • ಯಾವುದೇ ಸರ್ಕಾರಿ, ಅರೆ ಸರ್ಕಾರಿ ಕಚೇರಿಯ ಕಾಂಪೌಂಡ್, ಗೋಡೆ ಮೇಲೆ ಗೋಡೆಬರಹ, ಬಿತ್ತಿ ಚಿತ್ರಗಳನ್ನು ಅಂಟಿಸಬಾರದು.
  • ಖಾಸಗಿ ವ್ಯಕ್ತಿಗಳ ಕಾಂಪೌಂಡ್, ಗೋಡೆ ಮೇಲೆ ಗೋಡೆಬರಹ, ಬಿತ್ತಿ ಚಿತ್ರಗಳನ್ನು ಅಂಟಿಸುವವರು ಸಂಬಂಧಪಟ್ಟ ಮಾಲೀಕರ ಒಪ್ಪಿಗೆ ಮೇರೆಗೆ, ಸಂಬಂಧ ಪಟ್ಟ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು

ಈ ಎಲ್ಲಾ ಷರತ್ತುಗಳನ್ನು ಪಾಲಿಸಬೇಕು. ಇವುಗಳನ್ನು ಉಲ್ಲಂಘಿಸಿದ್ದೇ ಆದಲ್ಲ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡವನ್ನು ವಿಧಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಯಮಗಳು ಇಡೀ ರಾಜ್ಯಕ್ಕೂ ಅನ್ವಯಿಸುತ್ತವೆ ಎಂಬುದನ್ನು ಗಮನಿಸೋದು ಮರೆಯಬೇಡಿ.