ರಾಜ್ಯದಲ್ಲಿ ಬಿಜೆಪಿ ನಾಯಕರೇ ಇಲ್ಲ; ಉರಿಗೌಡ , ನಂಜೇಗೌಡರನ್ನು ಕರೆತಂದಿದ್ದಾರೆ: ಚೆಲುವರಾಯಸ್ವಾಮಿ

ರಾಜ್ಯದಲ್ಲಿ ಬಿಜೆಪಿ ನಾಯಕರೇ ಇಲ್ಲ; ಉರಿಗೌಡ , ನಂಜೇಗೌಡರನ್ನು ಕರೆತಂದಿದ್ದಾರೆ: ಚೆಲುವರಾಯಸ್ವಾಮಿ

ಮಂಡ್ಯ: ಉರಿಗೌಡ, ನಂಜೇಗೌಡ ಕುರಿತು ಚರ್ಚೆ ರಾಜಕೀಯ ನಾಯಕರ ಚರ್ಚೆ ಆಗುತ್ತಿದೆ. ಈ ಬಗ್ಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ
ರಾಜ್ಯದಲ್ಲಿ ಬಿಜೆಪಿಗೆ ನಾಯಕರೇ ಇಲ್ಲ. ಪ್ರಧಾನಿ ಮೋದಿ, ಅಮಿತಾ ಶಾರಂಥ ನಾಯಕರನ್ನು ರಾಜ್ಯದ ಜನರು ಒಪ್ಪಲ್ಲ, ಹೀಗಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಉರಿಗೌಡ, ನಂಜೇಗೌಡ ಕರೆ ತಂದಿದ್ದಾರೆ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಉರಿಗೌಡ, ನಂಜೇಗೌಡ ಪ್ರಸ್ತಾಪ ಬೇಡ ಎಂಬ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳ ಹೇಳಿಕೆ ಸರಿಯಾಗಿದೆ ಎಂದರು.

ಜೆಡಿಎಸ್‌ ಮತ್ತು ಬಿಜೆಪಿಯವರು ಐದು ವರ್ಷದಲ್ಲಿ ಕೆಟ್ಟ ಆಡಳಿತ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಚುನಾವಣೆಗೆ ಹೋಗುವ ನೈತಿಕ ಹಕ್ಕು ಇಲ್ಲ ಎಂದರು. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಯಡಿಊರಪ್ಪ ಅವರನ್ನು ದೂರ ಹಾಕಿದ ಮೇಲೆ ಬಿಜೆಪಿ ನಾಯಕತ್ವದ ಕುಗ್ಗಿದೆ. ಬಿಜೆಪಿಯವರು ಜಾತಿ, ಧರ್ಮ, ಯಾವುದೇ ಇತಿಹಾಸ ಹೀಗೆ ಎಲ್ಲವನ್ನೂ ತಿರುಚುವುದು ಕಾಯಕವಾಗಿದೆ ಎಂದರು. ಹೀಗಾಗಿ ಈ ರೀತಿಯ ಚರ್ಚೆಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.

ಇತ್ತ, ಉರಿಗೌಡ, ದೊಡ್ಡ ನಂಜೇಗೌಡ ಸಿನಿಮಾ ನಿರ್ಮಾಣದ ಕುರಿತಂತೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಚಿವ ಅಶೋಕ್ ' ಉರಿಗೌಡ, ನಂಜೇಗೌಡ ಚಿತ್ರದ ಬಗ್ಗೆ ಸ್ವಾಮೀಜಿಗಳು ಸಿನಿಮಾ ಬಗ್ಗೆ ಮಾತ್ರ ಮಾತನಾಡಿದ್ದಾರೆ ಎಂದರು .ಸಿನಿಮಾ ಮಾಡಬೇಕಾ, ಬೇಡವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾವು ಮುನಿರತ್ನ ಅವರನ್ನು ಕರೆದು ಮಾತನಾಡುತ್ತೇವೆ. ಚಿತ್ರದ ಬಗ್ಗೆ ಅಷ್ಟೇ ಸ್ವಾಮೀಜಿಗಳು ಮಾತನಾಡಿದ್ದಾರೆ ಎಂದರು.