ರಿಯಾಯಿತಿ ದರದಲ್ಲಿ 'ಟ್ರಾಫಿಕ್ ದಂಡ' ಪಾವತಿಗೆ ಅವಕಾಶ : ಬರೋಬ್ಬರಿ 12 ಕೋಟಿ ರೂ.ಸಂಗ್ರಹ

ರಿಯಾಯಿತಿ ದರದಲ್ಲಿ 'ಟ್ರಾಫಿಕ್ ದಂಡ' ಪಾವತಿಗೆ ಅವಕಾಶ : ಬರೋಬ್ಬರಿ 12 ಕೋಟಿ ರೂ.ಸಂಗ್ರಹ

ಬೆಂಗಳೂರು: ರಾಜ್ಯ ಸರ್ಕಾರದಿಂದ (Karnataka Government ) ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡೋ ನಿಟ್ಟಿನಲ್ಲಿ, ಶೇ.50ರಷ್ಟು ದಂಡ ಪಾವತಿಯನ್ನು ಜಾರಿಗೆ ತಂದಿತ್ತು. ಈ ಅವಕಾಶ ಮಾ.18 ಕ್ಕೆ ಮುಕ್ತಾಯವಾಗಿದ್ದು, ಬರೋಬ್ಬರಿ 12 ಕೋಟಿ ರೂ ದಂಡ ಸಂಗ್ರಹವಾಗಿದೆ.

ಮಾರ್ಚ್ 18 ರ ರಾತ್ರಿ 9 ಗಂಟೆಯವರೆಗಿನ ಲೆಕ್ಕಾಚಾರದ ಪ್ರಕಾರ 12,31,32,060 ರೂ ದಂಡ ಸಂಗ್ರಹವಾಗಿದೆ. ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಮಾರ್ಚ್ 4 ರಿಂದ ಮಾರ್ಚ್ 18 ರವರೆಗೆ ಅವಕಾಶ ನೀಡಲಾಗಿತ್ತು.ಫೆ.11 ರ ಒಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಶೇ.50 ರಷ್ಟು ಪಾವತಿಸಿ ಪ್ರಕರಣಗಳನ್ನು ಮಾ.18 ರೊಳಗೆ ಇತ್ಯರ್ಥಪಡಿಸಿಕೊಳ್ಳಲು ಸೂಚನೆ ನೀಡಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ ನಲ್ಲಿ ದಿನಾಂಕ 11-02-2023ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದ ಹಿನ್ನೆಲೆ ವಾಹನ ಸವಾರರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.

ಅಂದಹಾಗೇ ರಾಜ್ಯ ಸರ್ಕಾರದಿಂದ ಮೊದಲ ಬಾರಿಗೆ ಫೆ.11ರವರೆಗೆ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದಂತ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿತ್ತು. ಆ ಬಳಿಕ ಮತ್ತೆ ಕಾಲವಾಕಾಶ ನೀಡಿತ್ತು. ನಂತರ 15 ದಿನಗಳ ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಿತ್ತು.