ಯು.ಟಿ. ಖಾದರ್‌ಗೆ ಫೋನ್‌ ಮಾಡಿ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ವಂಚನೆ : ಕೇಸ್‌ ದಾಖಲು

ಯು.ಟಿ. ಖಾದರ್‌ಗೆ ಫೋನ್‌ ಮಾಡಿ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ವಂಚನೆ : ಕೇಸ್‌ ದಾಖಲು

ಮಂಗಳೂರು : ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರ ಮೊಬೈಲ್‌ ಫೋನ್‌ಗೆ ಕರೆ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಸಹಾಯ (ಪಿಎ) ಎಂದು ಕೊಂಡು ಹೇಳುವ ಮೂಲಕ ವಂಚಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರ ಮೊಬೈಲ್‌ 8146006626 ನಂಬರ್‌ನಿಂದ ಪದೇ ಪದೇ ಕರೆ ಬಂದಿತ್ತು. ಈ ಸಂದರ್ಭದಲ್ಲಿ ಅವರು ಬೇರೆ ಕಾರ್ಯಕ್ರಮಲ್ಲಿ ಇದ್ದ ಕಾರಣ ಅವರಿಗೆ ಕಾಲ್‌ ರಿಸೀವ್‌ ಮಾಡೋಕ್ಕೆ ಸಾಧ್ಯವಾಗಿಲ್ಲ ಬಳಿಕ ಮೊಬೈಲ್‌ ನೋಡಿದಾಗ ಅವರಿಗೆ ಎಂಬ ಮೆಸೇಜ್‌ ಬಂದಿತ್ತು

ಕರೆ ಬರುವ ಮೊದಲೇ ಖಾದರ್‌ ಅವರ ಮೊಬೈಲ್‌ನಲ್ಲಿ ಎಐಸಿಸಿ ಕಾರ್ಯದರ್ಶಿ .ಕೆ.ಸಿ. ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರು ಕಾಲರ್ ಮೂಲಕ ತಿಳಿದು ಬಂದಿದೆ.

ಈ ಬೆನ್ನಲ್ಲೆ ಯು.ಟಿ. ಖಾದರ್ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ರು, ದೂರು ದಾಖಲಿಸಿದರು. ಖಾದರ್ ಅವರಿಗೆ ವಂಚಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮೂಲಗಳು ತಿಳಿಸಿವೆ.