ಮಹಿಳಾ ಪ್ರೀಮಿಯರ್ ಲೀಗ್'ನ ದೊಡ್ಡ ಕಾಂಟ್ರವರ್ಸಿ, ಗುಜರಾತ್ ಜೈಂಟ್ಸ್ ವಿರುದ್ಧ ತಿರುಗಿ ಬಿದ್ದ ವಿಂಡೀಸ್ ಸ್ಟಾರ್

ಮಹಿಳಾ ಪ್ರೀಮಿಯರ್ ಲೀಗ್'ನ ದೊಡ್ಡ ಕಾಂಟ್ರವರ್ಸಿ, ಗುಜರಾತ್ ಜೈಂಟ್ಸ್ ವಿರುದ್ಧ ತಿರುಗಿ ಬಿದ್ದ ವಿಂಡೀಸ್ ಸ್ಟಾರ್

ಮುಂಬೈ : ಮಹಿಳಾ ಪ್ರೀಮಿಯರ್ ಲೀಗ್'ನಲ್ಲಿ (Women's premier league) ಗುಜರಾತ್ ಜೈಂಟ್ಸ್ ತಂಡ ಇಂದು ಯು.ಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಇದು ಗುಜರಾತ್ ಜೈಂಟ್ಸ್ ಪಾಲಿಗೆ ಮಾಡು ಇಲ್ಲ ಮಡಿ ಪಂದ್ಯ. ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ ಗುಜರಾತ್ ಜೈಂಟ್ಸ್ ಈ ಪಂದ್ಯವನ್ನು ಗೆಲ್ಲಲೇಬೇಕು.

ಡು ಆರ್ ಡೈ ಪಂದ್ಯಕ್ಕೆ ಸಜ್ಜಾಗಿರುವ ಗುಜರಾತ್ ಜೈಂಟ್ಸ್ ಪಾಳೆಯದಲ್ಲಿ ವಿವಾದವೊಂದು ಎದ್ದಿದೆ. ಗುಜರಾತ್ ಪರ ಆಡಬೇಕಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿ ದಿಯೇಂದ್ರ ಡಾಟಿನ್ (Deandra Dottin) ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

WPL ಆಟಗಾರ್ತಿಯರ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಫ್ರಾಂಚೈಸಿ ದಿಯೇಂದ್ರ ದಾಟಿನ್ ಅವರನ್ನು 60 ಲಕ್ಷ ರೂ. ಮೊತ್ತಕ್ಕೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮೊದಲೇ ದೈಹಿಕವಾಗಿ ಫಿಟ್ ಆಗದ ಕಾರಣ, ಡಾಟಿನ್ ಬದಲು ಕಿಮ್ ಗಾರ್ತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದರ ವಿರುದ್ಧ ದಿಯೇಂದ್ರ ಡಾಟಿನ್ ಕಿಡಿ ಕಾರಿದ್ದು, ನಾನು ಫಿಟ್ ಆಗಿದ್ದರೂ, 3 ಮಂದಿ ವೈದ್ಯರಿಂದ ಫಿಸಿಕಲಿ ಫಿಟ್ ಅನ್ನಿಸಿಕೊಂಡ್ರೂ ನನ್ನನ್ನು ಉದ್ದೇಶಪೂರ್ವಕವಾಗಿ ಕಂಡದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಟ್ವಿಟರ್'ನಲ್ಲಿ ತಮ್ಮ ಹೇಳಿಕೆಯನ್ನು ದಿಯೇಂದ್ರ ಡಾಟಿನ್ ಬಿಡುಗಡೆ ಮಾಡಿದ್ದಾರೆ.ವೆಸ್ಟ್ ಇಂಡೀಸ್'ನ 31 ವರ್ಷದ ಆಲ್ರೌಂಡರ್ ದಿಯೇಂದ್ರ ಡಾಟಿನ್ ಅಂತರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಹೇಳಿದ್ದು, ಸದ್ಯ ಕೆನಡಾದಲ್ಲಿ ನೆಲೆಸಿದ್ದಾರೆ. ಸ್ಫೋಟಕ ಹೊಡೆತಗಳಿಗೆ ಹೆಸರಾಗಿರುವ ಡಾಟಿನ್, ಪಾರ್ಟ್ ಟೈಮ್ ಮೀಡಿಯಂ ಪೇಸ್ ಬೌಲರ್ ಕೂಡ ಹೌದು. ಮಹಿಳಾ ಪ್ರೀಮಿಯರ್ ಲೀಗ್'ನಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಡಿಯೇಂದ್ರ ಡಾಟಿನ್ ಟೂರ್ನಿ ಆರಂಭಕ್ಕೂ ಮೊದಲೇ ಆರೋಗ್ಯದ ಸಮಸ್ಯೆಯಿಂದ ಬಳಲಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದ ಡಾಟಿನ್ ನಂತರ ತಂಡ ಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ಅವರನ್ನು ತಂಡದಿಂದ ಕೈಬಿಟ್ಟಿದ್ದ ಗುಜರಾತ್ ಜೈಂಟ್ಸ್, ಆಸ್ಟ್ರೇಲಿಯಾದ ಮಧ್ಯಮ ವೇಗದ ಬೌಲರ್ ಕಿಮ್ ಗಾರ್ತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.