2ನೇ ಏಕದಿನ ಪಂದ್ಯದ ಟಾಸ್ ರಿಪೋರ್ಟ್, ಆಡುವ ಬಳಗ, Live ಸ್ಕೋರ್

ಬಾಂಗ್ಲಾದೇಶ ಹಾಗೂ ಐರ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದು ಎರಡನೇ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಬಾಂಗ್ಲಾದೇಶ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ 338 ರನ್‌ಗಳಿಸಿತ್ತು. ಇದನ್ನು ಬೆನ್ನಟ್ಟಿದ ಐರ್ಲೆಂಡ್ ಕೇವಲ 155 ರನ್‌ಗಳಿಸಿದ್ದು 183 ರನ್‌ಗ ಅಂತರದ ಬೃಹತ್ ಸೋಲು ಕಂಡಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಇಬ್ಬರು ಆಟಗಾರರು ಶತಕ ವಂಚಿತವಾಗಿದ್ದರು. ಶಕೀಬ್ ಅಲ್ ಹಸನ್ 93 ರನ್‌ಗಳಿಸಿದರೆ ತೌಹಿದ್ ಹೃದಯ್ 92 ರನ್‌ಗಳಿಸಿ ಔಟಾಗಿದ್ದರು.
Live score ಹೀಗಿದೆ
ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ತೌಹಿದ್ ಹೃದಯೋಯ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ನಸುಮ್ ಅಹ್ಮದ್, ಹಸನ್ ಮಹಮೂದ್
ಬೆಂಚ್: ಮುಸ್ತಾಫಿಜುರ್ ರೆಹಮಾನ್, ರೋನಿ ತಾಲೂಕ್ದಾರ್, ಶೋರಿಫುಲ್ ಇಸ್ಲಾಂ, ಅಫೀಫ್ ಹೊಸೈನ್
ಐರ್ಲೆಂಡ್ ಆಡುವ ಬಳಗ: ಸ್ಟೀಫನ್ ಡೊಹೆನಿ, ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಆಂಡಿ ಮ್ಯಾಕ್‌ಬ್ರೈನ್, ಮಾರ್ಕ್ ಅಡೇರ್, ಮ್ಯಾಥ್ಯೂ ಹಂಫ್ರೀಸ್, ಗ್ರಹಾಂ ಹ್ಯೂಮ್
ಬೆಂಚ್: ಗರೆತ್ ಡೆಲಾನಿ, ಬೆಂಜಮಿನ್ ವೈಟ್, ಫಿಯಾನ್ ಹ್ಯಾಂಡ್, ಥಾಮಸ್ ಮೇಯೆಸ್