ಮಂಡ್ಯದಲ್ಲಿ ಬಿಜೆಪಿ ನಾಯಕರ, ಕಾರ್ಯಕರ್ತರ ಲೆಕ್ಕಾಚಾರ ಉಲ್ಟಾ ಮಾಡಿದ ಸುಮಲತಾ ಅಂಬರೀಷ್​!

ಮಂಡ್ಯದಲ್ಲಿ ಬಿಜೆಪಿ ನಾಯಕರ, ಕಾರ್ಯಕರ್ತರ ಲೆಕ್ಕಾಚಾರ ಉಲ್ಟಾ ಮಾಡಿದ ಸುಮಲತಾ ಅಂಬರೀಷ್​!

ಮಂಡ್ಯ: ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ ಬಳಿಕ ಮಂಡ್ಯದಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್​ ಅವರು ಸಕ್ರಿಯರಾಗಿರುತ್ತಾರೆ ಎಂಬ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಲೆಕ್ಕಾಚಾರ ಇದೀಗ ಉಲ್ಟಾ ಆಗಿದೆ. ತಮ್ಮ ರಾಜಕೀಯ ನಿರ್ಧಾರದ ಬಳಿಕವೂ ಸುಮಲತಾ ಮಂಡ್ಯದಿಂದ ನಾಪತ್ತೆಯಾಗಿದ್ದಾರೆ.

ಬಿಜೆಪಿ ಬೆಂಬಲಿಸಿದ ನಂತರ ಕ್ಷೇತ್ರದಿಂದ ಸುಮಲತಾ ಅವರು ಅಂತ ಕಾಯ್ತುಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿಲ್ಲ. ಮಂಡ್ಯದಲ್ಲಿ ಸುಮಲಯಾ ಹೆಚ್ಚು ಸಕ್ರಿಯರಾಗುತ್ತಾರೆ ಎಂದು ಕಮಲ ಪಡೆ ಲೆಕ್ಕಾಚಾರ ಹಾಕಿತ್ತು. ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗಿತ್ತು. ಆದರೆ, ಮಂಡ್ಯದತ್ತವು ರೆಬೆಲ್​ ಲೇಡಿ ತಿರುಗಿ ನೋಡುತ್ತಿಲ್ಲ.

ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಚಿಂತನೆಯಲ್ಲಿದ್ದ ಸುಮಲತಾ ಇದೀಗ ಸ್ವಲ್ಪ ಮೌನವಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್​ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲೇ ಉಳಿದುಕೊಂಡು ಟಿಕೆಟ್​​ಗಾಗಿ ಸುಮಕ್ಕ ಒತ್ತಡ ಹಾಕುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಮಂಡ್ಯ ಅಥವಾ ಮದ್ದೂರಿನಿಂದ ಸ್ಪರ್ಧೆ ಮಾಡೋದಕ್ಕೆ ಸುಮಲತಾ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್​ ಗ್ರೀನ್ ಸಿಗ್ನಲ್​​ಗಾಗಿ ಕಾಯುತ್ತಿದ್ದಾರಂತೆ. ಸುಮಲತಾ ಬೆಂಬಲದ ಬಳಿಕ ಪಕ್ಷದ ಚಟುವಟಿಕೆ ಗರಿಗೆದರಲಿದೆ ಎಂದು ಕಾರ್ಯಕರ್ತರು ಲೆಕ್ಕಾಚಾರ ಹಾಕಿದ್ದರು. ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿಕೊಂಡೇ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂದು ಟಿಕೆಟ್​ ಆಕಾಂಕ್ಷಿಗಳು ಅಂದಾಜಿಸಿದ್ದರು. ಆದರೆ, ಚುನಾವಣೆ ಸಮೀಪಿಸುತ್ತಿದ್ದರೂ ಕಳೆದ 6 ದಿನಗಳಿಂದ ಸುಮಲತಾ ಅವರು ಮಂಡ್ಯಕ್ಕೆ ಬಾರದೇ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.

ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೋದ ಸುಮಲತಾ, ಮತ್ತೆ ಮಂಡ್ಯದತ್ತ ತಿರುಗಿ ನೋಡೇ ಇಲ್ಲ. ಮಂಡ್ಯಕ್ಕೆ ಬಾರದೆ ಏನು ಮಾಡುತ್ತಿದ್ದಾರೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರಲ್ಲೇ ಹೊಸ ಹೊಸ ಚರ್ಚೆಗೆ ಸುಮಲತಾ ನಡೆ ಗ್ರಾಸವಾಗಿದೆ. (ದಿಗ್ವಿಜಯ ನ್ಯೂಸ್​)