ಸ್‌ವಿಬಿ ಬಿಕ್ಕಟ್ಟು, ಬ್ಯಾಂಕ್‌ಗಳಿಗೆ ಆರ್‌ಬಿಐ ಎಚ್ಚರಿಕೆ, ಸ್ಟಾರ್ಟ್‌ಅಪ್‌ಗಳಿಗೆ ಪ್ರಭಾವವೇನು?

ಸ್‌ವಿಬಿ ಬಿಕ್ಕಟ್ಟು, ಬ್ಯಾಂಕ್‌ಗಳಿಗೆ ಆರ್‌ಬಿಐ ಎಚ್ಚರಿಕೆ, ಸ್ಟಾರ್ಟ್‌ಅಪ್‌ಗಳಿಗೆ ಪ್ರಭಾವವೇನು?

ಯುಎಸ್‌, ಯುರೋಪ್‌ ರಾಷ್ಟ್ರಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಕಂಡು ಬಂದಿದೆ. ಯುಎಸ್‌ನ ಸಿಲಿಕಾನ್‌ ವ್ಯಾಲಿ ಬ್ಯಾಂಕ್ ಮುಚ್ಚಲಾಗಿದೆ. ಈ ನಡುವೆ ಆಸ್ತಿ-ಬಾಧ್ಯತೆಯ ಅಸಮತೋಲನದ ಬಗ್ಗೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ.

ಬೇರೆ ಸಹಾಯ ಲಭ್ಯವಾಗದೆ ಕಾರ್ಯ ನಿರ್ವಹಣೆ ಮಾಡುವ ಹಣಕಾಸು ಸ್ಥಿತಿಯಲ್ಲಿ ಇಲ್ಲದ, ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದುಕೊಂಡಿದೆ.

2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಿಕ್ಕಟ್ಟಿನ ಬಳಿಕ ಮತ್ತೊಂದು ಬ್ಯಾಂಕ್ ಆದ ಸಿಗ್ನೇಚರ್ ಬ್ಯಾಂಕ್‌ ಕೂಡಾ ಮುಚ್ಚಲ್ಪಟ್ಟಿದೆ. 2022ರ ಕೊನೆಯ ವೇಳೆಗೆ ಎಸ್‌ವಿಬಿ ಆಸ್ತಿ ರೂಪದಲ್ಲಿ ಬ್ಯಾಂಕ್‌ನಲ್ಲಿ 209 ಬಿಲಿಯನ್ ಯುಎಸ್‌ ಡಾಲರ್ ಇದ್ದರೆ, ಡೆಪಾಸಿಟ್ ರೂಪದಲ್ಲಿ 175.4 ಬಿಲಿಯನ್ ಯುಎಸ್‌ ಡಾಲರ್ ಇತ್ತು. ಈ ಆಧಾರದಲ್ಲಿ ನೋಡಿದಾಗ ಯುನೈಟೆಡ್ ಸ್ಟೇಟ್ಸ್‌ನ 16ನೇ ಅತೀ ದೊಡ್ಡ ಬ್ಯಾಂಕ್ ಇದಾಗಿತ್ತು.

ಭಾರತದಲ್ಲಿಯೂ ಎಚ್ಚರಿಕೆಯ ಕರೆಗಂಟೆ

ಸಿಲಿಕಾನ್ ವ್ಯಾಲಿ ಬ್ಯಾಂಕ್‌, ಸಿಗ್ನೇಚರ್ ಬ್ಯಾಂಕ್ ಮುಚ್ಚಲ್ಪಟ್ಟ ಬಳಿಕ ಬೇರೆ ದೇಶಗಳಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಇದರಂತೆಯೇ ಆರ್‌ಬಿಐ ಕೂಡಾ ಭಾರತದ ಬ್ಯಾಂಕ್‌ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಎಸ್‌ವಿಬಿ ಕುಸಿತವು ಭಾರತದ ಸ್ಟಾರ್ಟ್‌ಅಪ್‌ಗಳು ಇತರೆ ಸಂಸ್ಥೆಗಳ ಮೇಲೆಯೂ ಪ್ರಭಾವ ಬೀರಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್, "ಕೆಲವು ಭಾರತೀಯ ಸಂಸ್ಥೆಯು ಬಿಲಿಯನ್ ಡಾಲರ್‌ಗೂ ಅಧಿಕ ಸಂಪತ್ತು ಎಸ್‌ವಿಬಿಯಲ್ಲಿದೆ," ಎಂದು ತಿಳಿಸಿದ್ದು, ಪ್ರಭಾವಕ್ಕೆ ಒಳಗಾದ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿರುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ತಿಳಿಸಿದ್ದಾರೆ. ಚಂದ್ರಶೇಖರ್ ಪ್ರಕಾರ, ಭಾರತೀಯ ಬ್ಯಾಂಕ್‌ಗಳು ಹಣಕಾಸು ಸಚಿವರಿಗೆ ನೀಡಿದ ಸಲಹೆಯನ್ನು ಅನುಸರಿಸಿದರೆ ಎಸ್‌ವಿಬಿಯಲ್ಲಿ ಕ್ಯಾಪಿಟಲ್‌ನೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಠೇವಣಿ ಬೆಂಬಲಿತ ಕ್ರೆಡಿಟ್ ಲೈನ್ ಅನ್ನು ಒದಗಿಸಬಹುದು.