ಬೆಳ್ಳಿಪ್ರಕಾಶ ಪರ 10 ಕೋ. ರೂ. ಮೌಲ್ಯದ ಆಸ್ತಿ ಪಣ ಇಟ್ಟ ಬೆಂಬಲಿಗ

ಬೆಳ್ಳಿಪ್ರಕಾಶ ಪರ 10 ಕೋ. ರೂ. ಮೌಲ್ಯದ ಆಸ್ತಿ ಪಣ ಇಟ್ಟ ಬೆಂಬಲಿಗ

ಡೂರು: ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೆಳ್ಳಿಪ್ರಕಾಶ್‌ ಮತ್ತೊಮ್ಮೆ ಗೆಲ್ಲುವುದು ಖಚಿತ. ಯಾರು ಬೇಕಾದರೂ ಬೆಟ್ಟಿಂಗ್‌ ಕಟ್ಟಲು ಸಿದ್ಧರಿದ್ದರೆ ಬನ್ನಿ ಎಂದು ತೆಲುಗುಗೌಡ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಗುಡಿಗೌಡರಾದ ಎಸ್‌.ಜಿ. ಕೊಪ್ಪಲಿನ ಎಸ್‌.ಬಿ.ಹನುಮಂತಪ್ಪ ಪಂಥಾಹ್ವಾನ ನೀಡಿದ್ದಾರೆ.

ತಾಲೂಕಿನ ಎನ್‌.ಜಿ. ಕೊಪ್ಪಲು ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ಬಳಿಕ ಶಾಸಕ ಬೆಳ್ಳಿಪ್ರಕಾಶ್‌ ಉಪಸ್ಥಿತರಿದ್ದ ಸಭೆಯಲ್ಲಿ ಇಂಥದ್ದೊಂದು ಸವಾಲೆಸೆದರು. ಬೆಟ್ಟಿಂಗ್‌ಗೆ ಆಹ್ವಾನ ನೀಡಿದ್ದಾರೆ.

ತೆಲುಗು ಗೌಡ ಸಮಾಜವನ್ನು ಮುನ್ನಡೆಸಿ ಮಾಜಿ ಅಧ್ಯಕ್ಷರಾಗಿರುವ ಗುಡಿ ಗೌಡರಾದ ಸಣ್ಣೇಗೌಡನ ಕೊಪ್ಪಲಿನ ಹಿರಿಯರಾದ ಎಸ್‌.ಬಿ.ಹನುಮಂತಪ್ಪ 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೆಳ್ಳಿಪ್ರಕಾಶ್‌ ಮತ್ತೂಮ್ಮೆ ಗೆಲುವು ಸಾ ಧಿಸಲಿದ್ದು ಇದಕ್ಕೆ ವಿರುದ್ಧವಾಗಿ ಯಾರು ಬೇಕಾದರೂ ಬೆಟ್ಟಿಂಗ್‌ ಕಟ್ಟಲು ಸಿದ್ಧರಿದ್ದರೆ ತಾವು ತಮ್ಮ ಸಮಸ್ತ ಆಸ್ತಿಯನ್ನೇ ನೀಡುವುದಾಗಿ ಘೋಷಿಸಿದರು. ಹನುಮಂತಪ್ಪ ಅವರಿಗೆ ಉತ್ತಮವಾದ ಭೂಮಿ, ಕೋಳಿಫಾರಂ, ಮನೆ ಮತ್ತಿತರ ಆಸ್ತಿಗಳಿದ್ದು ಇದರೆಲ್ಲದರ ಮೌಲ್ಯ ಸುಮಾರು 10 ಕೋಟಿ ಎಂದು ಅವರೇ ಘೋಷಿಸಿ ಪಂಥಾಹ್ವಾನ ನೀಡಿದ್ದಾರೆ. ಸಭೆಯಲ್ಲಿದ್ದ ತೆಲುಗುಗೌಡ ಸಮಾಜದ ಯುವಕರು, ಮುಖಂಡರು ಚಪ್ಪಾಳೆ ತಟ್ಟುವುದರ ಮೂಲಕ ಹನುಮಂತಪ್ಪ ಅವರ ಆಹ್ವಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ