ಬೀದರ್‌ನಲ್ಲಿ 'ಹಳೆ ದ್ವೇಷ'ಕ್ಕೆ ಮರ್ಡರ್..! ಕತ್ತಿಯಿಂದ ಕಡಿದು 'ಯುವಕನ ಭೀಕರ ಹತ್ಯೆ'

ಬೀದರ್: ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ.
ನಡು ರಸ್ತೆಯಲ್ಲೇ ಇಬ್ಬರು ಯುವಕರ ಗುಂಪಿನ ನಡುವಿನ ಗಲಾಟೆ ತೀವ್ರಗೊಂಡು ಆನಂದ್ ಪುಲೆ ಎಂಬ ಯುವಕನ್ನು ತ್ತಿಯಿಂದ ಕಡಿದು ಬರ್ಬರವಾಗಿ (26)ಕೊಲೆ ಮಾಡಲಾಗಿದೆ ಎಂದು ಗುರುತಿಸಲಾಗಿದೆ . ಹೆಚ್ಚಿನ ಚಿಕಿತ್ಸೆಗಾಗಿಕೂಡಲೇ ಉಮರ್ಗಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾರ್ಗಮಧ್ಯೆ ಆನಂದ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಯಬಂದಿದೆ. ಅಷ್ಟೆ ಅಲ್ಲ ಗಲಾಟೆಯಲ್ಲಿ ಇನ್ನೊಬ್ಬ ಯುವಕ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಈ ಮರ್ಡರ್ ಸಂಬಂಧಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಚರಣೆಯಲ್ಲಿ ಪೊಲೀಸರು ತೊಡಗಿದ್ದಾರೆ ಎಂದು ವರದಿಯಾಗಿದೆ.