ಪ್ರತಿ ತಿಂಗಳು ಪದವಿಧರರಿಗೆ 3000 ರೂ. ಯುವ ನಿಧಿ

ಪ್ರತಿ ತಿಂಗಳು ಪದವಿಧರರಿಗೆ 3000 ರೂ. ಯುವ ನಿಧಿ

ಬೆಳಗಾವಿ: ರಾಜ್ಯದಲ್ಲಿನ ಪದವಿದರರಿಗೆ ಮಾಸಿಕ‌3000 ರೂ, ಡಿಪ್ಲೋಮಾ ಮುಗಿಸಿದವರಿಗೆ‌1500 ರೂ. ಯುವ ನಿಧಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ‌ಮಾಡಿದರು.

ಯುವ ಸಮುದಾಯಕ್ಕೆ ಉದ್ಯೋಗ, ಉದ್ಯೋಗ ಸೃಷ್ಟಿಸಲು ಹೊಸ ಯೋಜನೆ ಒಳಗೊಂಡಿರುವ ಪ್ರತ್ಯೇಕ ಪ್ರಣಾಳಿಕೆ ಹೊರ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.

ಶಿವಕುಮಾರ ಘೋಷಣೆ ಮಾಡಿದರು. ನಗರದ ಸಿಪಿಇಡಿ ಮೈದಾನದಲ್ಲಿ ಸೋಮವಾರ ಜರುಗಿದ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಗೆ ಶಾಶ್ವತ‌ಪರಿಹಾರ ಕಲ್ಪಿಸಲು ಕಾಂಗ್ರೆಸ್ ಹೊಸ ಯೋಜನೆ ತರಲಿದೆ.ಸರ್ಕಾರದ. ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ‌ಮಾಡಲಾಗುವುದು. ಉದ್ಯೋಗ ಸೃಷ್ಟಿ ಯುವಸಮುದಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರತ್ಯೇಕ ಪಾಲಸಿಗಳನ್ನು ಜಾರಿಗೊಳಿಸಲಾಗುವುದು ಎಂದರು.