ಶೋಭಾ ಡೆವಲಪರ್ಸ್ ಕಚೇರಿ ಮೇಲೆ ಐಟಿ ದಾಳಿ; ತೆರಿಗೆ ವಂಚನೆ ಕುರಿತು ಅಧಿಕಾರಿಗಳಿಂದ ಪರಿಶೀಲನೆ

ಬೆಂಗಳೂರು: ಆದಾಯ ತೆರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಹಿನ್ನೆಲೆ ಬೆಂಗಳೂರು ಹಾಗೂ ಚೆನ್ನೈ ವಿಭಾಗದ ಐಟಿ ಅಧಿಕಾರಿಗಳು ಶೋಭಾ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳನ್ನೊಳಗೊಂಡ ಐದು ತಂಡಗಳಿಂದ ಏಕಕಾಲಕ್ಕೆ ವೈಟ್ ಫೀಲ್ಡ್ ರಸ್ತೆಯ ಹೂಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿಯ ಕಚೇರಿಗಳಲ್ಲಿ ಮೇಲೆ ದಾಳಿ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಬೆಳಿಗ್ಗೆಯಿಂದ ಕಡತಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳ ಪರಿಶೀಲನೆ ಹಿನ್ನೆಲೆ ಶೋಬಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಇಂದಿನ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಐಟಿ ಅಧಿಕಾರಿಗಳ ಸೂಚನೆಯಂತೆ ಎಲ್ಲ ನೌಕರರನ್ನು ಸ್ಥಳೀಯ ಪೊಲೀಸರು ಕಚೇರಿ ಅವರಣದಲ್ಲೇ ಇರಿಸಿದ್ದಾರೆ.