ನನ್ನ ಮೇಲೆ ಎಷ್ಟೇ ದಾಳಿ ನಡೆದ್ರೂ ಪರವಾಗಿಲ್ಲ, ಇವುಗಳಿಗೆ ಹೆದರಲ್ಲ'' ; ರಾಹುಲ್ ಗಾಂಧಿ

ನವದೆಹಲಿ : ರಾಜಕೀಯ ದಾಳಿಗಳು, ತನ್ನ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಿಂದ ನಾನು ಬೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು, ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದರು.
ಪ್ರಧಾನಿ, ಬಿಜೆಪಿ, ಆರ್ಎಸ್ಎಸ್ ಮತ್ತು ಪೊಲೀಸರಿಗೆ ಅನೇಕ ಜನರು ಹೆದರಬಹುದು. ಆದರೆ ನಾನು ಅವರಿಗೆ ಹೆದರುವುದಿಲ್ಲ. ಅದು ಅವರ ಸಮಸ್ಯೆಯಾಗಿದೆ. ಇದಕ್ಕೆ ನಾನ್ಯಾಕೆ ಭಯಪಡಬೇಕು. ನಾನು ಸತ್ಯವನ್ನು ನಂಬುತ್ತೇನೆ ಎಂದೇಳಿದ್ದಾರೆ.
ನನ್ನ ಮೇಲೆ ಎಷ್ಟೇ ದಾಳಿಯಾದರು, ಎಷ್ಟು ಬಾರಿ ನನ್ನ ಮನೆಗೆ ಪೊಲೀಸರನ್ನು ಕಳುಹಿಸಿದರು ಅಥವಾ ನನ್ನ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದು ಮುಖ್ಯವಲ್ಲ, ನಾನು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.