ಮಂಗಳವಾರ ಮಂಡನೆಯಾಗಬೇಕಿದ್ದ 'ದೆಹಲಿ ಬಜೆಟ್'ಗೆ ಕೇಂದ್ರ ಸರ್ಕಾರ ತಡೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ, ಮಂಗಳವಾರ ವಿಧಾನಸಭೆಯ ಮುಂದೆ ದೆಹಲಿ ಸರ್ಕಾರದ ಬಜೆಟ್ ಮಂಡನೆಯನ್ನ ಕೇಂದ್ರವು ಮುಂದೂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೇಜ್ರಿವಾಲ್ ವೀಡಿಯೊವೊಂದನ್ನ ಎಎಪಿ ಹಂಚಿಕೊಂಡಿದ್ದು, ಈ ಸಂದರ್ಭದಲ್ಲಿ ಅವರು ಮಂಗಳವಾರ ದೆಹಲಿ ಬಜೆಟ್ ಮಂಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ
ಹೌದು, ವಿಡಿಯೋದಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಬೇಕಿದ್ದ ದೆಹಲಿ ಸರ್ಕಾರದ ಬಜೆಟ್‌ಗೆ ಕೇಂದ್ರವು ತಡೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಸರ್ಕಾರದ ಪ್ರಕಾರ, ಬಜೆಟ್'ನ್ನ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಇನ್ನೂ ಅನುಮೋದಿಸಿಲ್ಲ. ದೆಹಲಿಯ ಬಜೆಟ್‌ಗೆ ಕೇಂದ್ರ ಸರ್ಕಾರದ ಅನುಮೋದನೆ ಬೇಕು, ನಂತರ ಅದನ್ನ ಸದನದಲ್ಲಿ ಮಂಡಿಸಲಾಗುತ್ತದೆ.