ಜನರ ಕಿವಿಗೆ ಚಂಡು ಹೂ ಇಟ್ಟಿದ್ದಾರೆ. ಈ ಬಾರಿಯ ಬಜೆಟ್ನ್ನು ಜಾತ್ರೆ ಕನ್ನಡಕ ಹಾಕಿಕೊಂಡು ನೋಡಬೇಕಷ್ಟೇ

ಬೆಂಗಳೂರು: ಕಳೆದ ಬಾರಿ ಮಂಡಿಸಿದ್ದ ಬಜೆಟ್ನಲ್ಲಿ ಏನು ಮಾಡಿದ್ರಿ ಎಂದು ಕೇಳಿದ್ದೆವು. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ. 90% ಆಶ್ವಾಸನೆಯನ್ನು ಈವರೆಗೆ ಈಡೇರಿಸಿಲ್ಲ. ಜನರ ಕಿವಿಗೆ ಚೆಂಡು ಹೂ ಇಟ್ಟಿದ್ದಾರೆ. ಇದು ಇದು ಬಿಸಿಲ ಕುದುರೆ ಬಜೆಟ್ ಎಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಪ್ರತಿಕ್ರಿಯಿಸಿದ ಡಿಕೆಶಿ, ಜಿಎಸ್ಟಿ ಹಣದಲ್ಲಿ 15% ಹಣ ಕೂಡ ರಾಜ್ಯಕ್ಕೆ ಬರುವುದಿಲ್ಲ. ಈ ಬಾರಿಯ ಬಜೆಟ್ನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು. ಧಮ್ ಧೈರ್ಯ ಅಂತ ಭಾಷಣ ಮಾಡುವ ಸಿಎಂ ಭಾಷಣದಲ್ಲಿ ಧಮ್ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಬೊಮ್ಮಾಯಿ ಅವರು ಬಿಜೆಪಿ ಎಂಎಲ್ಎ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಮಹಾದಾಯಿ, ಕೃಷ್ಣಾಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಈ ಮೂಲಕ ಡಬಲ್ ಇಂಜಿನ್ ಆಫ್ ಆಗಿದೆ. ಮನೆಯ ಶೋಕೇಸ್ನಲ್ಲಿ ಪ್ರದರ್ಶನಕ್ಕೆ ಇಟ್ಟುವಂತಹ ಬಜೆಟ್ ಇದಾಗಿದೆ. ಈ ಬಜೆಟ್ನಿಂದ ಕಾಂಗ್ರೆಸ್ಗೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿ ಅವರ ಪಾಲಿಗೆ ಇದು 2ನೇ ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್ ಗಾತ್ರ ಒಟ್ಟು 3 ಲಕ್ಷ 9 ಸಾವಿರ 182 ಕೋಟಿ ರೂ. ಆಗಿದೆ.