ಗಾಂಧಿ ನಗರದಲ್ಲಿ ಯುಗಾದಿ ಹಬ್ಬಕ್ಕೆ ಸೀರೆ ಹಂಚಿದ ದಿನೇಶ್ ಗುಂಡುರಾವ್ : ಮುಗಿಬಿದ್ದ ಮಹಿಳೆಯರಿಂದ ಆಕ್ರೋಶ

ಬೆಂಗಳೂರು : ಮುಂದಿನ ವಿಧಾನ ಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯೋದಕ್ಕೆ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ .ಇದೀಗ ಗಾಂಧಿ ನಗರದಲ್ಲಿ ಯುಗಾದಿ ಹಬ್ಬಕ್ಕಾಗಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಸೀರೆ ಹಂಚಲಾಗಿದೆ.
ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರು ಸೀರೆ, ಕುಕ್ಕರ್, ಮೂಗುತಿ ಹಂಚುವುದು ಹೊಸದಲ್ಲ. ಸೀರೆ ಆಸೆಗೆ ಬಿದ್ದ ಮಹಿಳೆಯರು ಆಸೆ ಪಟ್ಟು ಮುಗಿಬಿದ್ದು ಸೀರೆ ಪಡೆದುಕೊಂಡಿದ್ದರು. ಬಳಿಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಸೀರೆ ಹಂಚಿಕೆ ಮಾಡಿದ ಬೆನ್ನಲ್ಲೆ ಹಬ್ಬಕ್ಕೆ ಮಹಿಳಾ ಮಣಿಗಳು ಹರಕು ಸೀರೆ ಕೊಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಗಿಬಿದ್ದು ಸೀರೆ ಪಡೆದ ಮಹಿಳೆಯರು ಕೊಟ್ಟ ಸೀರೆಯೆಲ್ಲ ಹರಿದು ಹೋಗಿದೆ ಕೇವಲ ಇನ್ನೂರು ರೂಪಾಯಿ ಸೀರೆ ಎಂದು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.