ಕೊಡಗಿನಲ್ಲಿ 'ಕಾಳು ಮೆಣಸು' ಕೊಯ್ಯುವಾಗ ಘೋರ ದುರಂತ : ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ದುರ್ಮರಣ

ಕೊಡಗಿನಲ್ಲಿ 'ಕಾಳು ಮೆಣಸು' ಕೊಯ್ಯುವಾಗ ಘೋರ ದುರಂತ : ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ದುರ್ಮರಣ

ಡಿಕೇರಿ : ತೋಟದಲ್ಲಿ ಕಾಳು ಮೆಣಸು ಕೊಯ್ಯುವಾಗ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಜಿಲ್ಲೆಯ ಬೇರೆ ಬೇರೆ ತೋಟದಲ್ಲಿ ಒಂದೇ ದಿನ ಈ ಘಟನೆ ನಡೆದಿದೆ.

ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಅಬ್ರುದ್ದೀನ್ (31) ಹಾಗೂ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಕಾರ್ಮಿಕ ಇಸ್ಮಾಯಿಲ್ ಹುಸೇನ್ (33) ಮೃತಪಟ್ಟಿದ್ದಾರೆ.

ಕಾರ್ಮಿಕ ಹುಸೇನ್ ಹೈಸೊಡ್ಲೂರು ಗ್ರಾಮದಲ್ಲಿ ಕಾಳು ಮೆಣಸು ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟರೆ, ಅಬ್ರುದ್ದೀನ್ ನಾಲ್ಕೇರಿ ಗ್ರಾಮದ ತೋಟವೊಂದರಲ್ಲಿ ಕಾಳು ಮೆಣಸು ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.