ಕಳ್ಳತನ ಮಾಡಿದ್ದಕ್ಕೆ ಸಾರ್ವಜನಿಕರ ಎದುರು ನಾಲ್ವರ ಕೈ ಕಡಿದ ತಾಲಿಬಾನ್

ಕಳ್ಳತನ ಮಾಡಿದ್ದಕ್ಕೆ ಸಾರ್ವಜನಿಕರ ಸಮ್ಮುಖದಲ್ಲೇ ನಾಲ್ವರ ಎರಡೂ ಕೈಗಳನ್ನು ತಾಲಿಬಾನಿಗಳು ಕಡಿದು ಹಾಕಿದ ಘಟನೆ ಆಫ್ಘಾನಿಸ್ತಾನದ ಕಂದಾರ್ ನ ಅಹ್ಮದ್ ಶಶಿ ಕ್ರೀಡಾಂಗಣದಲ್ಲಿ ನಡೆದಿದೆ.
ಇದೇ ವೇಳೆ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ 9 ಮಂದಿಗೆ ಸಾರ್ವಜನಿಕರ ಎದುರು ಥಳಿಸಲಾಯಿತು ಎಂದು ಸರಕಾರದ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಂಗಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಶಿಕ್ಷೆ ನೀಡುವ ಮುನ್ನ ಆರೋಪಿಗಳನ್ನು ಮೈದಾನದಲ್ಲಿ ಸಾಲಾಗಿ ಕೂರಿಸಲಾಗಿದ್ದು, ಈ ಫೋಟೊವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.