ಕರ್ನಾಟಕ ನಗರಾಬಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆಯಲ್ಲಿ ಸೈನಿಕರಿಗೆ ಶೇ.5 ಮೀಸಲಾತಿ

ಕರ್ನಾಟಕ ನಗರಾಬಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆಯಲ್ಲಿ ಸೈನಿಕರಿಗೆ ಶೇ.5 ಮೀಸಲಾತಿ

ಶಿವಮೊಗ್ಗ : ಕೇಂದ್ರ ಸಶಸ್ತ್ರ ಪಡೆಯ ಸೇವಾನಿರತ ಸೈನಿಕರು, ಮಾಜಿ ಸೈನಿಕರು, ಮೃತ ಮಾಜಿ ಸೈನಿಕರ ಪತ್ನಿ ಮತ್ತು ಸೇವೆಯಲ್ಲಿರುವಾಗ ಮರಣಹೊಂದಿರುವ ಯೋಧರ ಅವಲಂಬಿತರುಗಳಿಗೆ ಶೇ. 5% ರಷ್ಟು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ನಿವೇಶನ ಹಂಚಿಕೆಯಲ್ಲಿ ಮೀಸಲಾತಿಯನ್ನು ನೀಡಲಾಗಿದೆ ಎಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.

ಮಿಲಿಟರಿ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ಸ್ಪರ್ಶ್ (SPARSH)ಗೆ ವರ್ಗಾಯಿಸಲ್ಪಟಿರುವ ಮಿಲಿಟರಿ ಪಿಂಚಣಿ/ಮಿಲಿಟರಿ ವಿಧವಾ ಪಿಂಚಣಿದಾರರು ಪ್ರತಿ ವರ್ಷದಂತೆ ನವೆಂಬರ್ ತಿಂಗಳು ಜೀವಂತ ಪ್ರಮಾಣ ಪತ್ರವನ್ನು ಬ್ಯಾಂಕ್ ಅಥವಾ ಆನ್‍ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದ್ದರೂ, ಈವರಗೆ ಹಲವಾರು ಪಿಂಚಣಿದಾರರು ಸಲ್ಲಿಸಿಲ್ಲವಾದ್ದರಿಂದ ಪಿಂಚಣಿಯನ್ನು ನಿಲ್ಲಿಸಲಾಗುವುದು. ಆದ್ದರಿಂದ ಕೂಡಲೇ ಜೀವಂತ ಪ್ರಮಾಣ ಪತ್ರ ಸಲ್ಲಿಸುವಂತೆ ಅಂತಿಮವಾಗಿ ಸೂಚಿಸಲಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆದ್ದರಿಂದ ಈವರೆಗೆ ಜೀವಂತ ಪ್ರಮಾಣ ಪತ್ರ ಸಲ್ಲಿಸದ ಮಿಲಿಟರಿ ಪಿಂಚಣಿದಾರರು ಕೂಡಲೇ ಬ್ಯಾಂಕ್ ಅಥವಾ ಆನ್‍ಲೈನ್‍ನಲ್ಲಿ ಜೀವಂತ ಪ್ರಮಾಣವನ್ನು ಸಲ್ಲಿಸಿ ಪಿಂಚಣಿಯನ್ನು ಮುಂದುವರೆಸಿಕೊಳ್ಳುವಂತೆ ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.