ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ. ಎನ್ನುತ್ತಲೇ ಜಮೀರ್​ ಹೇಳಿದ್ದೇನು?

ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ. ಎನ್ನುತ್ತಲೇ ಜಮೀರ್​ ಹೇಳಿದ್ದೇನು?

ಮೈಸೂರು: ಕರ್ನಾಟಕ ಕಾಂಗ್ರೆಸ್​ ಅನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಛಿದ್ರ ಮಾಡಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್​ ಅವರು ಕರ್ನಾಟಕದ ಶಾಸಕರೊಬ್ಬರಿಗೆ 500 ಕೋಟಿ ರೂಪಾಯಿ ಆಫರ್​ ನೀಡಿದ್ದಾರೆ ಎಂದು ತೆಲಂಗಾಣ ಕೆಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಜಮೀರ್​ ಅಹ್ಮದ್​ ಹೆಸರು ಮುನ್ನಲೆಗೆ ಬಂದಿದೆ. ಇದು ರಾಜ್ಯರಾಜಕೀಯಲದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಕರ್ನಾಟಕ ಕಾಂಗ್ರೆಸ್​ನಲ್ಲಿ ಒಡಕುಂಟು ಮಾಡಲು ಶಾಸಕ ಜಮೀರ್​ ಅಹಮದ್​ 500 ಕೋಟಿ ಆಮಿಷಕ್ಕೆ ಒಳಗಾದ್ರಾ? ಎಂಬಿತ್ಯಾದಿ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಜಮೀರ್​ ಅವರು ಹೇಳಿದ್ದೇನು ಗೊತ್ತಾ?
ನಾನು ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ರೂ. ಆಫರ್​ ಬಗ್ಗೆ ಗೊತ್ತಿಲ್ಲ ಎಂದು ಶಾಸಕ ಜಮೀರ್​ ಅಹಮದ್​ ಹೇಳಿದ್ದಾರೆ.

ಮೈಸೂರಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್​, ನಾನು ಹೈದರಾಬಾದ್​ಗೆ ಹೋಗಿದ್ದು ನಿಜ. ಕೆಸಿಆರ್​ ಭೇಟಿ ಮಾಡಿದ್ದೂ ನಿಜ. ನಮ್ಮ ಭೇಟಿಯಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಶಾಸಕ ರೋಹಿತ್​ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ ರಾವ್​ ಅವರನ್ನು ಭೇಟಿ ಮಾಡುವಂತೆ ಕೇಳಿಕೊಂಡಿದ್ದರು. ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ, ಏನೂ ಸಂಬಂಧವೇ ಇಲ್ಲ. 500 ಕೋಟಿ ರೂ. ಬಗ್ಗೆ ಯಾರು ಆರೋಪ ಮಾಡಿದ್ದಾರೋ ಅವರನ್ನೇ ಕೇಳಿ ಎಂದಿದ್ದಾರೆ.