ಈ ಬಾರಿ ಚುನಾವಣೆಗೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ: ಶಾಸಕ ಎನ್. ಮಹೇಶ್

ಚಾಮರಾಜನಗರ: ಈ ಬಾರಿ ಚುನಾವಣೆಗೆ ನಾನು ಸಹ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ನನ್ನ ಬಿಟ್ಟು ಬೇರೆಯವರಿಗೆ ಕೊಟ್ಟರೂ ಕೆಲಸ ಮಾಡುವೆ, ಸ್ಪರ್ಧೆಗಿಳಿಯಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನಗೆ ಹೈಕಮಾಂಡ್ ಟಿಕೆಟ್ ನೀಡಿದರೆ ಬೇರೆಯವರು ನನ್ನ ಪರ ಕೆಲಸ ಮಾಡಬೇಕು.
ಯಾರು, ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಜನಾಭಿಪ್ರಾಯ ಮೇ.16ರಂದು ಎಲ್ಲರಿಗೂ ತಿಳಿಯುತ್ತೆ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ. ಬಸ್ ನಿಲ್ದಾಣ ಮಳಿಗೆ ವಿಚಾರದಲ್ಲಿ ಕಾನೂನು ಪ್ರಕಾರ ಸಾರಿಗೆ ಇಲಾಖೆ ನಿಯಮ ಬಾಹಿರವಾಗಿ ಟೆಂಡರ್ ಕರೆದಿದೆ. ಯಾವುದೇ ಲೋಪವಾಗಿಲ್ಲ, ನಾನು ಅಧಿಕಾರಿಗಳಿಗೆ ಒತ್ತಡ ತಂದಿಲ್ಲ ಎಂದರು.