ಈ ಬಾರಿಯೂ ಯುಗಾದಿ ಸಂದರ್ಭದಲ್ಲಿ ಹಲಾಲ್ ಕಟ್ ಬಹಿಷ್ಕಾರ: ಪ್ರಮೋದ್ ಮುತಾಲಿಕ್

ಮಂಗಳೂರು: ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮುಂದುವರೆಯಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಕಟ್ ಬಹಿಷ್ಕರಿಸಿ ಜಟ್ಕಾ ಕಟ್ ಸ್ವೀಕರಿಸಿ ಎಂದು ಕಳೆದ ವರ್ಷ ಆರಂಭಿಸಿದ ಅಭಿಯಾನ ಯಶಸ್ವಿಯಾಗಿತ್ತು.