ಬ್ಯಾಂಕ್ ಗ್ರಾಹಕರ ಗಮನಕ್ಕೆ: ಇಲ್ಲಿದೆ ಏಪ್ರಿಲ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ

ಬ್ಯಾಂಕ್ ಗ್ರಾಹಕರ ಗಮನಕ್ಕೆ: ಇಲ್ಲಿದೆ ಏಪ್ರಿಲ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ

ವದೆಹಲಿ : ಪ್ರಸಕ್ತ ಹಣಕಾಸು ವರ್ಷ (2022-23) ಮಾರ್ಚ್ 31 ರಂದು ಕೊನೆಗೊಳ್ಳುವುದರಿಂದ ಮತ್ತು ಹೊಸ ಹಣಕಾಸು ವರ್ಷ (2023-24) ಏಪ್ರಿಲ್ 1 ರಿಂದ ಪ್ರಾರಂಭವಾಗುವುದರಿಂದ, ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನೇರವಾಗಿ ಹಣ ಮತ್ತು ಬ್ಯಾಂಕುಗಳಿಗೆ ಸಂಬಂಧಿಸಿರುವುದರಿಂದ, ಎಲ್ಲಾ ಬ್ಯಾಂಕ್ ಗ್ರಾಹಕರು ಏಪ್ರಿಲ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಬಗ್ಗೆ ತಿಳಿದುಕೊಳ್ಳಬೇಕು.

ಹೊಸ ಹಣಕಾಸು ವರ್ಷ ಪ್ರಾರಂಭವಾಗುವುದರೊಂದಿಗೆ, ಭಾರತದಲ್ಲಿ ಏಪ್ರಿಲ್ 2023 ರಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 15 ದಿನಗಳು ರಜೆ ಇರಲಿವೆ. ಹೆಚ್ಚಿನ ಭಾರತೀಯ ಬ್ಯಾಂಕುಗಳ ಕಾರ್ಯಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸುತ್ತದೆ, ಮತ್ತು ಬ್ಯಾಂಕಿಂಗ್ ವೇಳಾಪಟ್ಟಿಗಳು ಮತ್ತು ರಜಾದಿನಗಳನ್ನು ಸಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಬಂಧನೆಗಳಿಂದ ನಿಯಂತ್ರಿಸಲಾಗುತ್ತದೆ. ಆರ್ ಬಿಐ ಪ್ರಕಾರ 2023 ರ ಏಪ್ರಿಲ್ ತಿಂಗಳಲ್ಲಿ ಎರಡನೇ, ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 14 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ.

2023 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ

ಏಪ್ರಿಲ್ 1 ದೇಶದ ಹಲವು ರಾಜ್ಯಗಳಲ್ಲಿ ಶನಿವಾರ ಬ್ಯಾಂಕ್ ಖಾತೆ ವಾರ್ಷಿಕ ಮುಕ್ತಾಯ

ಏಪ್ರಿಲ್ 2 ಭಾರತದಾದ್ಯಂತ ಭಾನುವಾರ ವಾರಾಂತ್ಯದ ರಜೆ

ಏಪ್ರಿಲ್ 4 ಮಂಗಳವಾರ ಮಹಾವೀರ ಜಯಂತಿ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ

ಏಪ್ರಿಲ್ 5 ಬುಧವಾರ ಬಾಬು ಜಗಜೀವನ್ ರಾಮ್ ಜನ್ಮದಿನ ಹೈದರಾಬಾದ್ (ತೆಲಂಗಾಣ)

ಏಪ್ರಿಲ್ 7 ದೇಶಾದ್ಯಂತ ಶುಕ್ರವಾರ ಗುಡ್ ಫ್ರೈಡೆ

ಏಪ್ರಿಲ್ 8 ತಿಂಗಳ ಎರಡನೇ ಶನಿವಾರ

ಏಪ್ರಿಲ್ 9 ಭಾನುವಾರ ವಾರಾಂತ್ಯದ ರಜೆ

ಏಪ್ರಿಲ್ 14 ಶುಕ್ರವಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಶನಿವಾರ ವಿಷು / ಬೋಹಾಗ್ ಬಿಹು / ಹಿಮಾಚಲ ದಿನ / ಬಂಗಾಳಿ ಹೊಸ ವರ್ಷದ ದಿನ (ನಬಬರ್ಶಾ) ಭಾರತದ ಅನೇಕ ರಾಜ್ಯಗಲ್ಲಿ ಬ್ಯಾಂಕ್ ಗಳು ರಜೆ ಇರಲಿವೆ.

ಏಪ್ರಿಲ್ 16 ಭಾನುವಾರ ವಾರಾಂತ್ಯದ ರಜೆ

ಏಪ್ರಿಲ್ 18 ಮಂಗಳವಾರ ಶಬ್-ಉಲ್-ಖಾದರ್ ಜಮ್ಮು ಮತ್ತು ಕಾಶ್ಮೀರ

ಏಪ್ರಿಲ್ 21 ಶುಕ್ರವಾರ ಈದ್-ಉಲ್-ಫಿತರ್ (ರಂಜಾನ್ ಈದ್)

ಏಪ್ರಿಲ್ 22 ತಿಂಗಳ ನಾಲ್ಕನೇ ಶನಿವಾರ ಮತ್ತು ರಂಜಾನ್ ಈದ್ ಭಾರತದಾದ್ಯಂತ ಬ್ಯಾಂಕ್ ಗಳಿಗೆ ರಜೆ

ಏಪ್ರಿಲ್ 23 ಭಾನುವಾರ ಬ್ಯಾಂಕ್ ವಾರಾಂತ್ಯದ ರಜೆ

ಏಪ್ರಿಲ್ 30 ಭಾನುವಾರ ಬ್ಯಾಂಕ್ ವಾರಾಂತ್ಯದ ರಜೆ