ಹಣಕ್ಕಾಗಿ ನೀರಿನ ಕ್ಯಾನ್ ಮಾರುತ್ತಿದ್ದರಂತೆ ರಿಷಬ್ ಶೆಟ್ಟಿ..!

ಹಣಕ್ಕಾಗಿ ನೀರಿನ ಕ್ಯಾನ್ ಮಾರುತ್ತಿದ್ದರಂತೆ ರಿಷಬ್ ಶೆಟ್ಟಿ..!

ಬೆಂಗಳೂರು : 'ಕಾಂತಾರ'ವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು 'ಶಿವ'ನಾಗಿ ಅಭಿನಯಿಸಿದ 'ರಿಷಬ್ ಶೆಟ್ಟಿ' ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ. ಕಾಂತಾರದ ಸಕ್ಸಸ್ ಮೂಲಕ 'ರಿಷಬ್' ಎಂಬ ಹೊಸ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ..

ಹೀಗಿರುವಾಗ ಹಣಕ್ಕಾಗಿ ನೀರಿನ ಕ್ಯಾನ್ ಮಾರುತ್ತಿದ್ದೆ ಎಂದು ತಮ್ಮ ಕಷ್ಟದ ಜೀವನದ ಬಗ್ಗೆ ರಿಷಬ್​ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶ ಒಂದರಲ್ಲಿ ಮಾತನಾಡಿರುವ ಅವರು ಹಣಕ್ಕಾಗಿ ನೀರಿನ ಕ್ಯಾನ್ ಮಾರುತ್ತಿದ್ದೆ ಎಂದು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಹಲವು ಕೆಲಸಗಳನ್ನು ಮಾಡಿದ್ದಾರೆ.

ಹಣಕ್ಕಾಗಿ ನೀರಿನ ಕ್ಯಾನ್ ಮಾರುತ್ತಿದೆ ಹಾಗೂ ಹೋಟೆಲ್ ನಡೆಸುತ್ತಿದೆ. ಹಾಗೂ ವಿದ್ಯಾಬ್ಯಾಸದ ಸಮಯದಲ್ಲಿಯೇ ಅವಕಾಶಗಳಿಗಾಗಿ ಪ್ರಯತ್ನಿಸಿದ್ದರಂತೆ. ಮೊದಲು ಕ್ಲಾಪ್ ಬಾಯ್ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಿಷಬ್​, ನಂತರ ತುಘಲಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನು ಕಾಲೇಜ್ ದಿನಗಳಲ್ಲಿ ರಿಷಬ್ ತಮ್ಮ ಅಕ್ಕನೊಂದಿಗೆ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ. ವಿಲ್ಸನ್ ಗಾರ್ಡನ್ ಬಳಿ ಮನೆ ಮಾಡಿಕೊಂಡಿದ್ದರೆ, ಅವರ ಅಕ್ಕ ಕೆಆರ್‌ಪುರಂ ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಬೆಳಗ್ಗೆ ಅಕ್ಕನನ್ನು ಬೈಕ್‌ನಲ್ಲಿ ಆಫೀಸ್‌ಗೆ ಬಿಟ್ಟು, ಅಲ್ಲಿಂದ ಹೇಸರಘಟ್ಟದಲ್ಲಿರುವ ಸಿನಿಮಾ ಇನ್ಸ್‌ಸ್ಟಿಟ್ಯೂಟ್‌ಗೆ ಹೋಗಿ, ಅಲ್ಲಿ ಸಿನಿಮಾ ಕ್ಲಾಸ್ ಮುಗಿಸಿ, ಸಂಜೆ ಅಕ್ಕನನ್ನು ಮರಳಿ ಆಫೀಸ್‌ನಿಂದ ಕರೆತರುತ್ತಿದ್ದರಂತೆ. ಮನೆ ಮನೆಗೆ ವಾಟರ್ ಬಾಟಲಿ ಸಪ್ಲೈ ಮಾಡುತ್ತಿದ್ದ ಇವರು, ಮಧ್ಯ ರಾತ್ರಿವರೆಗೂ ವಾಟರ್ ಸಪ್ಲೈ ಕೆಲಸ ಮಾಡಬೇಕಿತ್ತಂತೆ!

ಪ್ರಶಾಂತ್ ಶೆಟ್ಟಿ ಹೀರೆೋ ಆಗಬೇಕು ಎಂಬ ಕನಸು ಹೊತ್ತಿ ಬಂದವರು ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಸೈನೈಡ್, ಗಂಡ ಹೆಂಡತಿ ಸೇರಿದಂತೆ ಕೆಲಸ ಸಿನಿಮಾಗಳಲ್ಲಿ ಕ್ಲಾಪ್ ಬಾಯ್ ಆಗಿ, ಇತರೇ ಸಹಾಯಕ ಕೆಲಸಗಾರನಾಗಿ ದುಡಿದ್ದಿದ್ದಾರೆ. ಆಗೆಲ್ಲ ಸಿಕ್ಕಿದ್ದು ಊಟ, ಪುಡಿಗಾಸು ಮತ್ತು ಹಿರಿಯ ನಿರ್ದೇಶಕರಿಂದ ಬರೀ ಬೈಯ್ಗುಳವಂತೆ!